Monday, June 8, 2026
Homeಕರಾವಳಿಕಡಬ: ಅಪಘಾತವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

ಕಡಬ: ಅಪಘಾತವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

- Advertisement -
- Advertisement -

ಕಡಬ: ಅಪಘಾತವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ. ಕಡಬದ ನಾಗಪ್ರಸಾದ್ ಮೃತ ಯುವಕ .

ಇಂದು ಮರ್ದಾಳ ಮಸೀದಿ ಬಿಲ್ಡಿಂಗ್ ನಲ್ಲಿ ನಾಗಪ್ರಸಾದ್ ಅವರ ಐಶ್ವರ್ಯ ಗೋಲ್ಡ್ ಹೆಸರಿನ ಚಿನ್ನದಂಗಡಿ ಆರಂಭಗೊಳ್ಳಬೇಕಾಗಿತ್ತು.  ಈ ಹಿನ್ನೆಲೆಯಲ್ಲಿ ಬೇಕಾದ ತಯಾರಿಯಲ್ಲಿ ನಾಗಪ್ರಸಾದ್‌ ನಿರತರಾಗಿದ್ದರು ಆದರೆ ಅಂಗಡಿ ಶುಭಾರಂಭದ ದಿನವಾದ ಇಂದು ಬೆಳಿಗ್ಗೆ ನಾಗಪ್ರಸಾದ್‌ ಮೃತದೇಹವು ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಘಟನೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ, ತನಿಖೆಯ ನಂತರವಷ್ಟೇ ನಿಖರ ಕಾರಣ ತಿಳಿದುಬರಬೇಕಿದೆ.

- Advertisement -

Latest News

error: Content is protected !!