Sunday, April 28, 2024
Homeಅಪರಾಧತೋಟದಲ್ಲಿ ಮೇಯಲು ಕಟ್ಟಿ ಹಾಕಿದ್ದ ದನ ಕಳವು; ಪ್ರಕರಣದ ವಿರುದ್ಧ ದೂರು ದಾಖಲು

ತೋಟದಲ್ಲಿ ಮೇಯಲು ಕಟ್ಟಿ ಹಾಕಿದ್ದ ದನ ಕಳವು; ಪ್ರಕರಣದ ವಿರುದ್ಧ ದೂರು ದಾಖಲು

spot_img
- Advertisement -
- Advertisement -

ಬೆಳ್ತಂಗಡಿ: ಕೊಕ್ಕಡ ಗ್ರಾಮದ ಶಬರಾಡಿ ಎಂಬಲ್ಲಿ ತೋಟದಲ್ಲಿ ಮೇಯಲು ಕಟ್ಟಿ ಹಾಕಿದ್ದ ದನ ಕಳವುಗೊಂಡಿರುವ ಘಟನೆ ನಡೆದಿದೆ.

ಕಳವಾದ ದನ ಕೊಕ್ಕಡ ಗ್ರಾಮ, ಬೆಳ್ತಂಗಡಿ ನಿವಾಸಿ ಶಿವಪ್ರಸಾದ್ ಅವರಿಗೆ ಸೇರಿದ್ದು ಎನ್ನಲಾಗಿದೆ.

ಘಟನೆಯ ವಿವರ: ಮಾ. 25ರಂದು ಬೆಳ್ತಂಗಡಿ ನಿವಾಸಿ ಶಿವಪ್ರಸಾದ್ ಎಂಬವರು ತಮ್ಮ ದನವನ್ನು ತಮ್ಮದೇ ತೋಟದಲ್ಲಿ ಮೇಯಲೆಂದು ಕಟ್ಟಿ ಹಾಕಿದ್ದರು. ಆದರೆ ಮಧ್ಯಾಹ್ನದ ಹೊತ್ತು ತೋಟಕ್ಕೆ ಬಂದು ನೋಡುವಾಗ ದನವು ಕಟ್ಟಿ ಹಾಕಿದ್ದಲ್ಲಿ ಕಂಡು ಬಂದಿರುವುದಿಲ್ಲ. ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರೂ ದನವು ಎಲ್ಲೂ ಪತ್ತೆಯಾಗಿರುವುದಿಲ್ಲ. ಕಳವಾದ ದನದ ಮೌಲ್ಯ ರೂ 20,000 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿವಪ್ರಸಾದ್ ಅವರು ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 21/2024 ಕಲಂ: 379 IPC ಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

- Advertisement -
spot_img

Latest News

error: Content is protected !!