Wednesday, June 24, 2026
Homeಅಪರಾಧಉಳ್ಳಾಲದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಉಳ್ಳಾಲದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

- Advertisement -
- Advertisement -

ಮಂಗಳೂರು: ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ತಲಪಾಡಿಯ ಬಾರ್‌ವೊಂದರ ಬಳಿ ಅಕ್ರಮವಾಗಿ ಮಾದಕ ವಸ್ತು ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿ ತಲಪಾಡಿ ನಾರ್ಲ ಪಡೀಲ್‌ ನಿವಾಸಿ ಕಿರಣ್‌ ಡಿ’ಸೋಜಾ (25) ಎಂದು ತಿಳಿದು ಬಂದಿದೆ. ಈತನನ್ನು ಮಂಗಳೂರು ನಗರದ ದಕ್ಷಿಣ ಉಪವಿಭಾಗದ ಆ್ಯಂಟಿ ಡ್ರಗ್‌ ಟೀಮ್‌ ಬಂಧಿಸಿದ್ದು, ಆತನಿಂದ 30 ಸಾವಿರ ರೂ. ಮೌಲ್ಯದ 10 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಹಿತ ಸಾಗಾಟಕ್ಕೆ ಬಳಸಿದ್ದ ಸ್ಕೂಟರ್‌ ಮತ್ತು ಮೊಬೈಲ್‌ ಫೋನ್‌ ಅನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ಎನ್‌ಡಿಪಿಎಸ್‌ ಕಾಯ್ದೆಯಡಿ ಆರೋಪಿಯ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯು ನಿಷೇಧಿತ ಮಾದಕ ವಸ್ತು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿಯನ್ನು ಪಡೆದ ತೆ ಆ್ಯಂಟಿ ಡ್ರಗ್‌ ಟೀಮ್‌ನ ಸಿಬ್ಬಂದಿಗಳು ಮೇಲಧಿಕಾರಿಗಳ ನಿರ್ದೇಶನದಂತೆ ಸಾಜು ನಾಯರ್‌, ಮಹೇಶ್‌, ಶಿವರಾಜ್‌, ಅಕಂರ್ ಮತ್ತು ತಿರುಮಲೇಶ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

- Advertisement -

Latest News

error: Content is protected !!