Tuesday, June 9, 2026
Homeಅಪರಾಧಮಂಗಳೂರು : ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ ಆರೋಪಿ ಪೋಲೀಸರ ವಶಕ್ಕೆ!

ಮಂಗಳೂರು : ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ ಆರೋಪಿ ಪೋಲೀಸರ ವಶಕ್ಕೆ!

- Advertisement -
- Advertisement -

ಮಂಗಳೂರು :ಮಹಿಳೆಯೋರ್ವರಿಗೆ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ ಆರೋಪದಲ್ಲಿ ಮಂಗಳೂರು ಸೈಬರ್ ಠಾಣೆಯ ಪೊಲೀಸರು ಯುವಕನೋರ್ವನನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಮೂಲತಃ ಚಿಕ್ಕಮಗಳೂರಿನವನಾಗಿರುವ ಇವನು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾನೆ.

ಆರೋಪಿ ಸಂತೋಷ್ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಇದು ಆಕೆಯ ಮನೆಯವರಿಗೆ ಗೊತ್ತಾಗಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಯುವತಿಯನ್ನು ಆಕೆಯ ಚಿಕ್ಕಮ್ಮ ಮಂಗಳೂರಿಗೆ ಕರೆ ತಂದಿದ್ದರು. ಇದನ್ನು ತಿಳಿದ ಆರೋಪಿ ಕೋಪದಿಂದ ಯುವತಿಯ ಚಿಕ್ಕಮ್ಮನಿಗೆ ಅಶ್ಲೀಲ ಸಂದೇಶ ಕಳುಹಿಸಿ ಮಾಸಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ದೂರು ನೀಡಲಾಗಿತ್ತು. ಈ ಆಧಾರದಲ್ಲಿ ಸಂತೋಷ್‌ನನ್ನು ಮಂಗಳೂರು ಸೈಬರ್ ಪೊಲೀಸರು ಬಂಧಿಸಿದ್ದಾರೆ

- Advertisement -

Latest News

error: Content is protected !!