Friday, September 29, 2023
Homeತಾಜಾ ಸುದ್ದಿಇಂದು ಭಾರತದ ವಿವಿದೆಡೆ ಕೊರೊನ ವಾರಿಯರ್ಸ್‌ಗಳಿಗೆ ಸಶಸ್ತ್ರ ಪಡೆಗಳಿಂದ 'ಪುಷ್ಪವೃಷ್ಟಿ' ಗೌರವ

ಇಂದು ಭಾರತದ ವಿವಿದೆಡೆ ಕೊರೊನ ವಾರಿಯರ್ಸ್‌ಗಳಿಗೆ ಸಶಸ್ತ್ರ ಪಡೆಗಳಿಂದ 'ಪುಷ್ಪವೃಷ್ಟಿ' ಗೌರವ

- Advertisement -
- Advertisement -

ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳ ಎಲ್ಲಾ ಮೂರು ಸೇವೆಗಳು ಭಾನುವಾರ ದೇಶದಲ್ಲಿ ಸಾಂಕ್ರಾಮಿಕ ಕೊರೊನ ರೋಗದ ವಿರುದ್ಧ ಹೋರಾಡಲು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಯೋಧರೊಂದಿಗೆ ಗೌರವ ಅರ್ಪಿಸಲಿದ್ದಾವೆ.ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೊಳಿಸಲು ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಯನ್ನು ಗೌರವಿಸಲು ದೆಹಲಿಯ ಪೊಲೀಸ್ ಸ್ಮಾರಕ ಮತ್ತು ಇತರ ಹಲವಾರು ನಗರಗಳಲ್ಲಿ ಭಾನುವಾರ ಬೆಳಿಗ್ಗೆ ಮಾಲಾರ್ಪಣೆ ಮಾಡುವುದರೊಂದಿಗೆ ಧನ್ಯವಾದಗಳು ನೀಡುವ ಚಟುವಟಿಕೆಗಳು ಪ್ರಾರಂಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಆಸ್ಪತ್ರೆಗಳ ಮೇಲೆ ಇಂದು ಸೇನಾಪಡೆಗಳು ಹೆಲಿಕಾಪ್ಟರ್ ನಿಂದ ಹೂ ಮಳೆ ಸುರಿಸಲಿದೆ ಅಂತ ತಿಳಿದು ಬಂದಿದೆ. ಐಎಎಫ್‌ನ ಫೈಟರ್ ಜೆಟ್‌ಗಳು ದೆಹಲಿ, ಮುಂಬೈ, ಜೈಪುರ, ಅಹಮದಾಬಾದ್, ಗುವಾಹಟಿ, ಪಾಟ್ನಾ ಮತ್ತು ಲಕ್ನೋ ಸೇರಿವೆ. ಶ್ರೀನಗರ, ಚಂಡೀಗಡ ದೆಹಲಿ, ಜೈಪುರ, ಭೋಪಾಲ್, ಮುಂಬೈ, ಹೈದರಾಬಾದ್, ಬೆಂಗಳೂರು, ಕೊಯಮತ್ತೂರು ಮತ್ತು ತಿರುವನಂತಪುರಂ ಸೇರಿದಂತೆ ಹಲವಾರು ನಗರಗಳಲ್ಲಿ ಸೇನೆಯ ಸಾರಿಗೆ ವಿಮಾನಗಳು ಇದೇ ರೀತಿಯ ಕಸರತ್ತು ನಡೆಸಲಿವೆ. ಲೇಹ್, ಚಂಡೀಗಡ, ಡೆಹ್ರಾಡೂನ್, ಗಾಂಧಿನಗರ, ಮುಂಬೈ, ಜೈಪುರ, ವಾರಣಾಸಿ, ಪಾಟ್ನಾ, ಲಕ್ನೋ, ಭೋಪಾಲ್, ರಾಂಚಿ, ರಾಯ್‌ಪುರ, ಕೋಲ್ಕತಾ, ಇಟಾನಗರ್ ಮತ್ತು ಶಿಲ್ಲಾಂಗ್ ಸೇರಿದಂತೆ ಅನೇಕ ನಗರಗಳಲ್ಲಿನ ಆಯ್ದ ಆಸ್ಪತ್ರೆಗಳಲ್ಲಿ ಹೂವಿನ ದಳಗಳನ್ನು ಐಎಎಫ್ ಹೆಲಿಕಾಪ್ಟರ್‌ಗಳಿಂದ ಸುರಿಸಲಾಗುತ್ತದೆ.

- Advertisement -
spot_img

Latest News

error: Content is protected !!