Thursday, June 4, 2026
Homeಅಪರಾಧಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪ: ಮಂಗಳೂರು ಮೂಲದ ದಂಪತಿಗಳಿಗೆ 10 ವರ್ಷಗಳ ಕಠಿಣ...

ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪ: ಮಂಗಳೂರು ಮೂಲದ ದಂಪತಿಗಳಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ !

- Advertisement -
- Advertisement -

ರಾಯಪುರ: ಮಂಗಳೂರು ಮೂಲದ ದಂಪತಿಗೆ ಛತ್ತೀಸ್‌ಗಢ ರಾಯಪುರದ ನ್ಯಾಯಾಲಯ ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪದ ಮೇಲೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

ಜುಬೇರ್ ಹುಸೇನ್(42), ಅವನ ಪತ್ನಿ ಆಯೇಷಾ ಬಾನೋ(39) ಮತ್ತು ಧೀರಜ್ ಸಾವೋ(21), ಪಪ್ಪು ಮಂಡಲ್
ಮಂಗಳೂರು ಮೂಲದವಾರಗಿದ್ದಾರೆ. ಇವರ ಮೇಲಿನ ಆರೋಪ ಸಾಬೀತಾಗಿದೆ.

ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪದ ಮೇಲೆ, ಉಗ್ರನಿಗ್ರಹ ಕಾಯ್ದೆಯಾಗಿರುವ ಆಕ್ರಮ ಚಟುವಟಿಕೆ(ತಡೆ) ಕಾಯ್ದೆಯ ವಿವಿಧ ಸೆಕ್ಷನ್‍ಗಳಡಿ ಈ ನಾಲ್ವರಿಗೆ ನ್ಯಾಯಧೀಶ ಅಜಯ್ ಸಿಂಗ್ ರಜಪೂತ್ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.

ಬೀದಿ ಬದಿಯಲ್ಲಿ ಹೋಟೆಲ್ ಮಾಡುತ್ತಿದ್ದ ಈತ ಇಂಡಿಯನ್ ಮುಜಾಹಿದೀನ್, ಸಿಮಿ ಸಂಘಟನೆ ಜೊತೆ ಸಂಬಂಧ ಹೊಂದಿದವರಿಗೆ ಪಾಕಿಸ್ತಾನದ ಖಾಲಿದ್ ಎಂಬವನಿಂದ ಹಣ ಪಡೆದು ಉಗ್ರರ ಖಾತೆಗೆ ರವಾನಿಸುತ್ತಿದ್ದನು. ಜುಬೇರ್ ಹುಸೇನ್ ಮತ್ತು ಆಯೇಷಾ ಬಾನೋ ಬ್ಯಾಂಕ್ ಖಾತೆಗೂ ಸಹ ಈತ ಹಣವನ್ನು ಜಮೆ ಮಾಡುತ್ತಿದ್ದನು. ಈ ವಿಷಯವಾಗಿ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಬಂಧ ಹೊಂದಿದ ಆರೋಪದ ಮೇಲೆ 2013ರಲ್ಲಿ ಧೀರಜ್ ಸಾವೋನನ್ನು ಈ ಹಿಂದೆ ಬಂಧಿಸಲಾಗಿತ್ತು.

ಆಯೇಷಾ, ಈಕೆ ನಿಷೇಧಿತ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರರ ಜೊತೆ ನಂಟನ್ನು ಈಕೆ ಹೊಂದಿದ್ದಳು. ಯಾರಿಗೂ ಸಂದೇಹ ಬರದಂತೆ ಆದಾಯ ತೆರಿಗೆ ಇಲಾಖೆಯ ಕಣ್ಣನ್ನು ತಪ್ಪಿಸಲು 49 ಸಾವಿರಕ್ಕಿಂತ ಕಡಿಮೆ ಹಣವನ್ನು ವರ್ಗವಣೆ ಮಾಡುತ್ತಿದ್ದಳು.

ಅದು ಅಲ್ಲದೇ ಈಕೆ ಬಿಹಾರದ ಸುಮಾರು 50 ಬ್ಯಾಂಕ್ ಖಾತೆಯ ನೆಟ್ ಬ್ಯಾಂಕಿಂಗ್ ಅನ್ನು ಕೂಡ ಹೊಂದಿದ್ದಳು. ಈ ಮೂಲಕ ಉಗ್ರರಿಗೆ ಹಣವನ್ನು ಜಮೆ ಮಾಡುತ್ತಿದ್ದಳು. ಭಯೋತ್ಪಾದನೆ ಪ್ರಕರಣದಲ್ಲಿ ನಾಲ್ಪರು ಬಂಧನಕ್ಕೊಳಗಾದ ಬಳಿಕ 2013ರಲ್ಲಿ ಈಕೆಯನ್ನು ಬಿಹಾರದ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದರು.

- Advertisement -

Latest News

error: Content is protected !!