Saturday, June 6, 2026
Homeಕರಾವಳಿಮಂಗಳೂರು: ಆನ್‌ಲೈನಲ್ಲಿ ಹಣ ಸಂಪಾದನೆ ಮಾಡಬಹುದು ಎಂದು ನಂಬಿಸಿ ವಂಚನೆ !

ಮಂಗಳೂರು: ಆನ್‌ಲೈನಲ್ಲಿ ಹಣ ಸಂಪಾದನೆ ಮಾಡಬಹುದು ಎಂದು ನಂಬಿಸಿ ವಂಚನೆ !

- Advertisement -
- Advertisement -

ಮಂಗಳೂರು: ಅಪರಿಚಿತನೋರ್ವ ಆನ್‌ಲೈನ್ ಮೂಲಕ ಹಣ ಸಂಪಾದನೆ ಮಾಡುವ ಬಗ್ಗೆ ವ್ಯಕ್ತಿ ಒರ್ವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದರು. ಆ ಬಳಿಕ 1. 31 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತನೋರ್ವ ವ್ಯಕ್ತಿಯೊಬ್ಬರಿಗೆ ವಾಟ್ಸಾಪ್ ಸಂದೇಶ ಮೂಲಕ ವೆಬ್‌ಸೈಟ್‌ವೊಂದರ ಲಿಂಕ್ ಕಳುಹಿಸಿ ಅದರಲ್ಲಿ ನೋಂದಣಿ ಮಾಡಿ ಆನ್‌ಲೈನಲ್ಲಿ ಹಣ ಸಂಪಾದನೆ ಮಾಡಬಹುದು ಎಂದು ತಿಳಿಸಿದ್ದರು.

ಇದನ್ನು ನಂಬಿದ ವ್ಯಕ್ತಿಯು ಖಾತೆ ತೆರೆದು ತನ್ನ ಬ್ಯಾಂಕ್ ಖಾತೆಯಿಂದ 200 ರೂಪಾಯಿ ಪಾವತಿಸಿದ್ದರು. ಅನಂತರ ವೆಬ್‌ಸೈಟ್‌ನ ಲಿಂಕ್ ಕಳುಹಿಸಿದ ಅಪರಿಚಿತನು ತಾನು ಇದರ ಬೋನಸ್ ನೀಡುವೆ. ಅದಕ್ಕಾಗಿ ಇನ್ನಷ್ಟು ಮೊತ್ತ ಕಳುಹಿಸಿಕೊಡಲು ವ್ಯಕ್ತಿಗೆ ತಿಳಿಸಿದ್ದ.

ಅದನ್ನು ಕೂಡ ನಂಬಿದ ವ್ಯಕ್ತಿಯು ಹಂತ ಹಂತವಾಗಿ 1, 31, 481 ರೂ. ಗಳನ್ನು ಪಾವತಿಸಿದ್ದರು. ಆದರೆ ಅವರಿಗೆ ಯಾವುದೇ ಬೋನಸ್ ಅಥವಾ ಪಾವತಿಸಿದ ಹಣವನ್ನು ವಾಪಸ್ ನೀಡದೆ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!