Wednesday, April 16, 2025
Homeಕರಾವಳಿಕಾರ್ಕಳ: ಶೇಖರ್ ಅಜೆಕಾರು, ಜಿತೇಂದ್ರ ಕುಂದೇಶ್ವರ ಸೇರಿ ಹತ್ತು ಸಾಧಕ ಪತ್ರಕರ್ತರಿಗೆ ಸನ್ಮಾನ

ಕಾರ್ಕಳ: ಶೇಖರ್ ಅಜೆಕಾರು, ಜಿತೇಂದ್ರ ಕುಂದೇಶ್ವರ ಸೇರಿ ಹತ್ತು ಸಾಧಕ ಪತ್ರಕರ್ತರಿಗೆ ಸನ್ಮಾನ

spot_img
- Advertisement -
- Advertisement -

ಕಾರ್ಕಳ: 75 ವರ್ಷದ ಪತ್ರಿಕೆ ಯುಗಪುರುಷ ಮತ್ತು ಆರದಿರಲಿ ಬದುಕು ಆರಾಧನಾ ತಂಡ ಜಂಟಿಯಾಗಿ ಕಿನ್ನಿಗೋಳಿಯಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಯಲ್ಲಿ ಉಡುಪಿ ಜಿಲ್ಲೆಯ ಸಾಧಕ ಪತ್ರಕರ್ತರಾದ ಡಾ.ಶೇಖರ ಅಜೆಕಾರು, ಜಿತೇಂದ್ರ ಕುಂದೇಶ್ವರ, ಕಿರಣ್ ಮಂಜನಬೈಲು, ರೇಡಿಯೊ ಮಣಿಪಾಲದ ಡಾ.ರಶ್ಮಿ ಅಮ್ಮೆಂಬಳ ಸಹಿತ 10 ಮಂದಿಯನ್ನು ಸನ್ಮಾನಿಸಲಾಗುತ್ತಿದೆ ಎಂದು ಸಂಘಟಕರಾದ ಭುವನಾಭಿರಾಮ ಉಡುಪ ಮತ್ತು ಪದ್ಮಶ್ರೀ ನಿದ್ದೋಡಿ ತಿಳಿಸಿದ್ದಾರೆ.


ರಾಜ್ಯಮಟ್ಟದ ಗೌರವವನ್ನು ಪ್ರತಿಭಾನ್ವಿತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಗೌರವದ ಜೊತೆಗೆ ರಾಜ್ಯ ಮಟ್ಟದ ಗೌರವವನ್ನು ಡಾ.ಹರಿಕೃಷ್ಣ ಪುನರೂರು ಅವರು ಶ್ರೀನಿವಾಸ ಇಂದಾಜೆ, ಸಾಣೂರು ಅರುಣ್ ಶೆಟ್ಟಿಗಾರ್ ಸಹಿತ ಅತಿಥಿಗಳ ಸಮ್ಮಖದಲ್ಲಿ ಪ್ರದಾನಿಸುವರು. ಆರದಿರಲಿ ಬದುಕು ಆರಾಧನಾ ತಂಡ ನೂರಾರು ಬಾಲ ಪ್ರತಿಭೆಗಳಿಗೆ ಮತ್ತು ಅನಾರೋಗ್ಯ ಪೀಡಿತರಿಗೆ ಮತ್ತು ಸಹಾಯ ಅಗತ್ಯವುಳ್ಳವರಿಗೆ 4 ಲಕ್ಷಕ್ಕಿಂತ ಹೆಚ್ಚು ರೂಪಾಯಿಗಳ ಸಹಾಯ ಹಸ್ತ ನೀಡಿದೆ.


ತಂಡದ ವಾಯ್ಸ್ ಆಫ್ ಆರಾಧನಾ ಪೇಸ್ ಬುಕ್ ಪೇಜ್ 86000 ಸದಸ್ಯರನ್ನು ಹೊಂದಿದೆ. ಸಮಾಜ ಸೇವಾಸಕ್ತ ಸಂಸ್ಥೆಗಳು ಸಮಾಜದ ಮುಖ್ಯವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳನ್ನು ಗೌರವಿಸುವ ಮೂಲಕ ಸಮಾಜದ ಋಣ ಸಂದಾಯದ ಒಂದು ಸಣ್ಣ ಪ್ರಯತ್ನ ಮಾಡುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -
spot_img

Latest News

error: Content is protected !!