- Advertisement -
- Advertisement -
ಹೈದರಾಬಾದ್: ಶ್ರೀಶೈಲಂನಲ್ಲಿರುವ ತೆಲಂಗಾಣದ ಪವರ್ ಸ್ಟೇಷನ್ ನಲ್ಲಿ ನಿನ್ನೆ ತಡರಾತ್ರಿ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು, ಕೆಲವರು ಅಲ್ಲಿ ಸಿಲುಕಿಕೊಂಡಿರುವ ಶಂಕೆ ಇದೆ.
ತೆಲಂಗಾಣದ ನಾಗರಕುರ್ನೂಲ್ ಜಿಲ್ಲೆಯ ಶ್ರೀಶೈಲಂನಲ್ಲಿರುವ ಟಿಎಸ್ ಗೆನ್ಕೋ ಹೈಡೆಲ್ ಪವರ್ ಸ್ಟೇಷನ್ನಲ್ಲಿ ಈ ದುರಂತ ಸಂಭವಿಸಿದೆ.
ರಕ್ಷಣಾ ಪರಿಹಾರ ಕಾರ್ಯ ಭರದಿಂದ ಸಾಗುತ್ತಿದ್ದು, ಆರಂಭಿಕ ಮಾಹಿತಿಗಳ ಪ್ರಕಾರ ಶಾರ್ಟ್ ಸರ್ಕೀಟ್ ಸಂಭವಿಸಿದ ಕಾರಣ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಅಗ್ನಿ ದುರಂತ ಸಂಭವಿಸಿದ ವೇಳೆ ಅಲ್ಲಿ 19 ಜನರಿದ್ದರು ಎಂದು ಹೇಳಲಾಗುತ್ತಿದ್ದು, ಅವರ ಪೈಕಿ 10 ಜನ ಸ್ಥಳದಿಂದ ಸುರಕ್ಷಿತವಾಗಿ ಸುರಂಗದ ಮೂಲಕ ಹೊರಬಿದ್ದಿದ್ದಾರೆ. ಟಿಎಸ್ ಗೆನ್ಕೋ ಕಂಪನಿಯ ಆರು ನೌಕರರು ಮತ್ತು ಖಾಸಗಿ ಕಂಪನಿಯ ಮೂರು ನೌಕರರು ಅಲ್ಲಿ ಸಿಲುಕಿಕೊಂಡಿದ್ದಾರೆ.
- Advertisement -