Friday, June 5, 2026
Homeತಾಜಾ ಸುದ್ದಿರಾಜ್ಯದಾದ್ಯಂತ ನಿನ್ನೆ ಸಂಜೆಯಿಂದ 108 ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯ

ರಾಜ್ಯದಾದ್ಯಂತ ನಿನ್ನೆ ಸಂಜೆಯಿಂದ 108 ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯ

- Advertisement -
- Advertisement -

ಬೆಂಗಳೂರು: ರಾಜ್ಯದ ಅಗತ್ಯ ಸೇವೆಗಳಲ್ಲಿ ಒಂದಾದ 108 ಆಂಬ್ಯುಲೆನ್ಸ್ ಸೇವೆಯಲ್ಲಿ  ನಿನ್ನೆ ಸಂಜೆಯಿಂದ ವ್ಯತ್ಯಯ ಉಂಟಾಗಿದೆ.

ಅಪಘಾತ ಪ್ರಕರಣಗಳು, ವಿಷಕುಡಿದ ಪ್ರಕರಣಗಳು, ಹಾವು ಕಚ್ಚಿದ ಪ್ರಕರಗಳು, ಹೆರಿಗೆ ಪ್ರಕರಣಗಳು ಸೇರಿದಂತೆ ಅನೇಕ ತುರ್ತು ಚಿಕಿತ್ಸೆಗೆ ಅಂಬುಲೆನ್ಸ್ ಸೇವೆ ಅಗತ್ಯ. ಈ 108 ಅಂಬುಲೆನ್ಸ್ ಸೇವೆಯನ್ನು ಜಿವಿಕೆ ಸಂಸ್ಥೆ ನಡೆಸುತ್ತಿದೆ. ರಾಜ್ಯಾದ್ಯಂತ ದಿನಕ್ಕೆ ಸುಮಾರು 8 ಸಾವಿರ ಕರೆಗಳು 108 ಗೆ ಹೋಗುತ್ತವೆ. 8 ಸಾವಿರ ಕರೆಗಳಲ್ಲಿ 2 ಸಾವಿರ ಪ್ರಕರಣಗಳು ಗಂಭೀರ ಆಗಿರುತ್ತವೆ. ಆದರೆ ಈ ಅಂಬುಲೆನ್ಸ್ ಸೇವೆ ಸಿಗದೇ ಇದ್ದರೆ 2 ಸಾವಿರ ಗಂಭೀರ ಪ್ರಕರಣಗಳಲ್ಲಿ ಸಾವು ನೋವಾಗುವ ಸಾಧ್ಯತೆ ಹೆಚ್ಚಿರುತ್ತೆ.

ಆದರೆ ನಿನ್ನೆ ಸಂಜೆಯಿಂದ ಅಂಬುಲೆನ್ಸ್ ಸೇವೆ ಇಲ್ಲದ ಕಾರಣ ಜನರಿಗೆ ತೀರ ಸಮಸ್ಯೆ ಎದುರಾಗಿದೆ. ತಾಂತ್ರಿಕ ಸಮಸ್ಯೆಯಿಂದ 108 ಸೇವೆ ಸಿಗ್ತಿಲ್ಲ ಅಂತಾ ಹೇಳಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಿಂದ 108ಗೆ ಕರೆ ಹೋಗ್ತಿಲ್ಲ ಮತ್ತು ಕರೆ ಸ್ವೀಕರಿಸ್ತಿಲ್ಲ ಅಂತಾ ಹೇಳಲಾಗುತ್ತಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಜಿವಿಕೆ ಟೆಕ್ನಿಕಲ್ ಟೀಂ 108 ಸೇವೆಯಲ್ಲಿ ತಾಂತ್ರಿಕ ಸಮಸ್ಯೆ ಆಗಿರೋದು ನಿಜ. ಸರ್ವರ್ ಪ್ರಾಬ್ಲಂನಿಂದ ಕರೆ ಸ್ವೀಕರಿಸಲಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. 

- Advertisement -

Latest News

error: Content is protected !!