Friday, June 5, 2026
Homeಕರಾವಳಿಉಡುಪಿಕುಂದಾಪುರ: ತರಕಾರಿ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋ ವಾಹನ ಪಲ್ಟಿ

ಕುಂದಾಪುರ: ತರಕಾರಿ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋ ವಾಹನ ಪಲ್ಟಿ

- Advertisement -
- Advertisement -

ಕುಂದಾಪುರ: ಉಡುಪಿಯಿಂದ ಕೊಲ್ಲೂರು ಕಡೆ ತರಕಾರಿ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋ ವಾಹನವೊಂದು ಪಲ್ಟಿಯಾದ ಘಟನೆ ಕೋಟ ಸಮೀಪದ ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ..

ಟಯರ್ ಸ್ಫೋಟಗೊಂಡ ಕಾರಣ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತರಕಾರಿಗಳೆಲ್ಲಾ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!