Wednesday, June 24, 2026
Homeಉದ್ಯಮಕೆಲಸ ಮಾಡುತ್ತಿದ್ದ ಕಂಪನಿಯಿಂದಲೇ 55 ಲ್ಯಾಪ್‌ಟಾಪ್‌ ಕದ್ದ ಟೆಕ್ಕಿ!

ಕೆಲಸ ಮಾಡುತ್ತಿದ್ದ ಕಂಪನಿಯಿಂದಲೇ 55 ಲ್ಯಾಪ್‌ಟಾಪ್‌ ಕದ್ದ ಟೆಕ್ಕಿ!

- Advertisement -
- Advertisement -

ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದಂತಹ ಕಂಪನಿಯಿಂದಲೇ ಲ್ಯಾಪ್‌ಟಾಪ್‌ಗ್ಳನ್ನು ಕಳವು ಮಾಡುತ್ತಿದ್ದ ಸಿಬ್ಬಂದಿಯನ್ನು ವೈಟ್‌ ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ತಮಿಳುನಾಡಿನ ಹೊಸೂರು ತಾಲೂಕಿನ ತೋರಪಲ್ಲಿ ನಿವಾಸಿ ಮುರುಗೇಶ್‌ (29) ಎಂದು ತಿಳಿದು ಬಂದಿದೆ.  

ಪೊಲೀಸರು ಆರೋಪಿಯಿಂದ 22 ಲಕ್ಷ ರೂ. ಮೌಲ್ಯದ 55 ಲ್ಯಾಪ್‌ಟಾಪ್‌ ಗಳನ್ನು ಜಪ್ತಿ ಮಾಡಲಾಗಿದೆ.

ಘಟನೆಯ ವಿವರ: ವೈಟ್‌ ಫೀಲ್ಡ್‌ನ ಐಟಿಪಿಎಲ್‌ ಟೆಲಿಕಾಲರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಲ್ಲಿ ಲ್ಯಾಪ್ ಟಾಪ್ ಗಳು ಆಗಾಗ್ಗೆ ಕಳುವಾಗುತ್ತಿದ್ದು, ಈ ನಿಟ್ಟಿನಲ್ಲಿ ಕಂಪನಿ ಮಾಲಿಕ ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕಮಿಷನರ್‌ ದಯಾನಂದ ತಿಳಿಸಿದ್ದಾರೆ.

ಆರೋಪಿಯು ಕದ್ದ ಲ್ಯಾಪ್‌ಟಾಪ್‌ ಗಳನ್ನು ಹೊಸೂರಿನ ಹಳೆಯ ಲ್ಯಾಪ್‌ ಟಾಪ್‌ ರಿಪೇರಿ ಮತ್ತು ಮಾರಾಟ ಮಳಿಗೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!