ಉಡುಪಿ: ವಾಟ್ಸಾಪ್ ಗ್ರೂಪ್ ಮೂಲಕ ಅಧಿಕ ಲಾಭದ ಆಮಿಷ ಒಡ್ಡಿದ್ದನ್ನು ನಂಬಿ ವ್ಯಕ್ತಿಯೊಬ್ಬರು ಬರೋಬ್ಬರಿ 17 ಲಕ್ಷ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.ಅಶ್ವಿನ್ ಕಾಮತ್ ಬಿ (42) ಕುಂಜಿಬೆಟ್ಟು ಹಣ ಕಳೆದುಕೊಂಡ ವ್ಯಕ್ತಿ.
ಅಶ್ವಿನ್ GFSL-Security official Stocks-F10 ಎಂಬ ವಾಟ್ಸಾಫ್ ಗುಂಪಿಗೆ ಜಾಯಿನ್ ಆಗಿದ್ದರು. ಈ ಗ್ರೂಪಿನಲ್ಲಿ ಸ್ಟಾಕ್ ಮಾರ್ಕೇಟ್ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ನಂತರ ಅವರು ಹೇಳಿದ ಷೇರಿನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಗಳಿಸಬಹುದಾಗಿ ನಂಬಿಸಿದ್ದು ಅದರಂತೆ ದಿನಾಂಕ: 13/05/2024 ರಿಂದ ದಿನಾಂಕ: 03/06/2024 ರ ವರೆಗೆ ಆಪಾದಿತರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 17,89,001/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುತ್ತಾರೆ.
ಅದರೆ ಈ ತನಕ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲೀ ನೀಡದೇ ವಂಚನೆ ಮಾಡಿರುತ್ತಾರೆ. ಈ ಬಗ್ಗೆ CEN ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 68/2024 ಕಲಂ 66 (ಡಿ) ಐ.ಟಿ. ಆಕ್ಟ ಮತ್ತು 420 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ