Friday, April 19, 2024
Homeಆರಾಧನಾಹನುಮ ಜಯಂತಿಯಂದೇ ಕಣ್ಣೀರಿಟ್ಟ ಆಂಜನೇಯ: ವಿಡಿಯೋ ವೈರಲ್

ಹನುಮ ಜಯಂತಿಯಂದೇ ಕಣ್ಣೀರಿಟ್ಟ ಆಂಜನೇಯ: ವಿಡಿಯೋ ವೈರಲ್

spot_img
- Advertisement -
- Advertisement -

ಹುಬ್ಬಳ್ಳಿ: ಹನುಮ ಜಯಂತಿ ದಿನವೇ ಆಂಜನೇಯ ಕಣ್ಣೀರು ಹಾಕಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.


ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿರೋ ದೇವಸ್ಥಾನದಲ್ಲಿರುವ ಆಂಜನೇಯ ಕಣ್ಣಿರು ಹಾಕಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇತಿಹಾಸ ಪ್ರಸಿದ್ಧ ಪ್ರಾಣ ಹನುಮ ದೇವಸ್ಥಾನದಲ್ಲಿ ಈ ರೀತಿಯಾದ ಘಟನೆಗೆ ಇಡೀ ಗ್ರಾಮಕ್ಕೆ ಗ್ರಾಮವೇ ಚಕಿತಗೊಂಡಿದ್ದು, ಹನುಮನ ಮೂರ್ತಿಯಿಂದ ಕಣ್ಣೀರು ಜಿನಿಗುತ್ತಿರೋದಕ್ಕೆ ಎಲ್ಲಾ ಗ್ರಾಮಸ್ಥರು ಬಹಳ ಆಶ್ಚರ್ಯದಿಂದ ದೇವಸ್ಥಾನದತ್ತ ಮುಖಮಾಡಿದ್ದಾರೆ.


ಇನ್ನು, ಈ ಆಂಜನೇಯ ದೇವಸ್ಥಾನ ಸುಮಾರು 700 ವರ್ಷಗಳ ಇತಿಹಾಸ ಹೊಂದಿದ್ದು, ಜಕಣಾಚಾರಿ ಗುಡಿಯನ್ನು ಕಟ್ಟಿದ್ದಾರೆಂಬ ನಂಬಿಕೆ ಗ್ರಾಮಸ್ಥರಾಗಿದೆ. ಪ್ರತಿವರ್ಷ ಹನುಮ ಜಯಂತಿ ದಿನದಂದು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿತ್ತು. ಅದರಂತೆ ಈ ವರ್ಷವು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಾಗಿತು.
ನಂತರ ಆಂಜನೇಯನಿಗೆ ಮಂಗಳಾರತಿ ಮಾಡುವ ಸಮಯದಲ್ಲಿ ಕಣ್ಣಿಂದ ನೀರು ಜಿಗುಗಲು ಶುರುವಾಗಿದೆ.

ಇದನ್ನು ಕಂಡ ಅರ್ಚಕ ಆಶ್ಚರ್ಯಗೊಂಡು ಸ್ಥಳೀಯ ಗ್ರಾಮಸ್ಥರಿಗೆ ತಿಳಿಸಿದ್ದಾನೆ.ಆ ಬಳಿಕ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದುತ್ತಿದೆ. ಅದೇನೆ ಇರಲಿ ರಾಜ್ಯಾದ್ಯಂತ ಎಲ್ಲರೂ ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ವೇಳೆ ಬುಡರಸಿಂಗಿ ಹನುಮ ಕಣ್ಣೀರು ಹಾಕಿದ್ದು ಮಾತ್ರ ಭಕ್ತರಲ್ಲಿ ಆತಂಕ ಮೂಡಿಸಿದೆ.

- Advertisement -
spot_img

Latest News

error: Content is protected !!