Thursday, June 4, 2026
Homeಕರಾವಳಿಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಶಿಕ್ಷಕನ ಏಕಾಂಗಿ ಪ್ರತಿಭಟನೆ

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಶಿಕ್ಷಕನ ಏಕಾಂಗಿ ಪ್ರತಿಭಟನೆ

- Advertisement -
- Advertisement -

ಪುತ್ತೂರು: ಸೇವಾ ವಿಚಾರದಲ್ಲಿ ತಾರತಮ್ಯ ಸೇರಿದಂತೆ ಹಕ್ಕುಗಳ ವಿಚಾರದಲ್ಲಿ ತ‌ಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸರ್ಕಾರಿ ಮತ್ತು ಅರೆ ಸರ್ಕಾರಿ ವಿಕಲಚೇತನ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ, ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಹಶಿಕ್ಷಕ ಶಿವಪ್ಪ ರಾಥೋಡ್ ಅವರು ಶುಕ್ರವಾರ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಮೌನ ಧರಣಿ ನಡೆಸಿದರು

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮುಂದೆ ಚಾಪೆ ಹಾಕಿ ಕುಳಿತು ‘ಸಮಾನತೆ ನನ್ನ ಹಕ್ಕು ನನ್ನ ನಡೆ’ ಘೋಷವಾಕ್ಯದ ಅಡಿಯಲ್ಲಿ ಮೌನ ಧರಣಿ ಆರಂಭಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅವರು ತಾರತಮ್ಯ ಮಾಡಿರುವುದರಿಂದ ನ್ಯಾಯ ಸಿಗುವತನಕ ಧರಣಿ ಮುಂದುವರಿಸುವುದಾಗಿ ಅವರು ಮಾಧ್ಯಮಗಳ ಮುಂದೆ ತಿಳಿಸಿದರು.

ಯಾರ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸ ನಡೆದಿಲ್ಲ. ಅವರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ಶಿಕ್ಷಣಾಧಿಕಾರಿ ಲೋಕೇಶ್ ಸಿ. ನೀಡಿದ ಭರವಸೆಯಂತೆ ಮಧ್ಯಾಹ್ನ ಶಿಕ್ಷಕ ಶಿವಪ್ಪ ರಾಥೋಡ್ ಅವರು ಧರಣಿ ಅಂತ್ಯಗೊಳಿಸಿದರು.

- Advertisement -

Latest News

error: Content is protected !!