Saturday, June 6, 2026
Homeಕರಾವಳಿಮಂಗಳೂರಿನ ಅಡ್ಡೂರಿನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ಯುವಕನಿಗೆ ಟ್ಯಾಂಕರ್ ಡಿಕ್ಕಿ : ಯುವಕ ಸ್ಥಳದಲ್ಲೇ ಸಾವು

ಮಂಗಳೂರಿನ ಅಡ್ಡೂರಿನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ಯುವಕನಿಗೆ ಟ್ಯಾಂಕರ್ ಡಿಕ್ಕಿ : ಯುವಕ ಸ್ಥಳದಲ್ಲೇ ಸಾವು

- Advertisement -
- Advertisement -

ಮಂಗಳೂರು : ಟ್ಯಾಂಕರ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಫೋನ್ ನಲ್ಲಿ ಮಾತನಾಡುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನ ಅಡ್ಡೂರು ಬಳಿ ನಡೆದಿದೆ. ಹ್ಯಾರಿಸ್ (25) ಮೃತ ದುರ್ದೈವಿ.

ಟ್ಯಾಂಕರ್ ಲಾರಿ ಮಂಗಳೂರಿನಿಂದ ಅಡುಗೆ ಅನಿಲವನ್ನು ಸಾಗಿಸುತ್ತಿತ್ತು. ಹ್ಯಾರಿಸ್ ಅಂಗಡಿ ಬಳಿಯ ರಸ್ತೆಯಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಟ್ಯಾಂಕರ್ ಅವರಿಗೆ ಡಿಕ್ಕಿ ಹೊಡೆದು ಬಳಿಕ ಅಂಗಡಿಗೆ ಢಿಕ್ಕಿ ಹೊಡೆದಿದೆ. ಅತಿ ವೇಗವಾಗಿ ಟ್ಯಾಂಕರ್ ಚಲಾಯಿಸುತ್ತಿದ್ದದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಲ್ಲಿ ಅಂಗಡಿ ಸಂಪೂರ್ಣವಾಗಿ ಜಖಂ ಆಗಿದೆ.

- Advertisement -

Latest News

error: Content is protected !!