- Advertisement -
![]()
- Advertisement -
ಪುತ್ತೂರು; ಖ್ಯಾತ ನಿರೂಪಕರ, ರಾಷ್ಟ್ರ ಮಟ್ಟದ ಕಬಡ್ಡಿ ಕೋಚ್ ಬಾಲಕೃಷ್ಣ ರೈ ಪೊರ್ದಾಲ್ ಗೆ ಅವರಿಗೆ ತಾಲೂಕು ಯುವ ಪ್ರಶಸ್ತಿ ಒಲಿದಿದೆ.
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು ಇವುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ನೀಡುವ ಪುತ್ತೂರು ತಾಲೂಕು ಯುವ ಪ್ರಶಸ್ತಿಗೆ ಖ್ಯಾತ ನಿರೂಪಕ ಹಾಗೆಯೇ ರಾಷ್ಟ್ರೀಯ ಕಬಡ್ಡಿ ತರಬೇತುದಾರರಾಗಿರುವ ಬಾಲಕೃಷ್ಣ ರೈ ಪೊರ್ದಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಟ್ಟಂಪಾಡಿ ಗ್ರಾಮದ ಪೊರ್ದಾಲ್ ನಿವಾಸಿಯಾಗಿರುವ ಬಾಲಕೃಷ್ಣ ರೈಯವರು ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
- Advertisement -


