Friday, May 3, 2024
Homeಉದ್ಯಮಸ್ವಿಗ್ಗಿ : 1,100 ಸಿಬ್ಬಂದಿ ವಜಾ

ಸ್ವಿಗ್ಗಿ : 1,100 ಸಿಬ್ಬಂದಿ ವಜಾ

spot_img
- Advertisement -
- Advertisement -

ನವ ದೆಹಲಿ :ಮೇ.೧೮. ಕೊರೊನಾವೈರಸ್ ಲಾಕ್‌ಡೌನ್‌ದಿಂದಾಗಿ ಬ್ರಹತ್ ಆನ್ ಲೈನ್ ಆಹಾರ ವಿತರಣಾ ಕಂಪನಿ ಸ್ವಿಗ್ಗಿ ಕೂಡ ನಷ್ಟವನ್ನು ಅನುಭವಿಸುತ್ತಿದೆ , ಮುಂದಿನ ಕೆಲವು ದಿನಗಳಲ್ಲಿ 1,100 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಇಂದು ತಿಳಿಸಿದೆ.
”ಇಂದು ಸ್ವಿಗ್ಗಿ ಸಮೂಹಕ್ಕೆ ಅತ್ಯಂತ ಬೇಸರವಾದ ದಿನ. ನಮ್ಮ ಕಂಪನಿಯ ಸುಮಾರು 13 ಪರ್ಸೆಂಟ್‌ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದೇವೆ ಎಂದು ಸೋಮವಾರ ತನ್ನ ಉದ್ಯೋಗಿಗಳಿಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ಸ್ವಿಗ್ಗಿಯ ಸಹ ಸಂಸ್ಥಾಪಕ ಮತ್ತು ಸಿಇಒ ಶ್ರೀಹರ್ಷ ಮಜೆಟಿ ಅವರು ತಿಳಿಸಿದ್ದಾರೆ.
ಮಾರಕ ಕೋವಿಡ್-೧೯ ಲಾಕ್ ಡೌನ್ ಏಕಾಏಕಿ ಪ್ರಾರಂಭವಾದಾಗಿನಿಂದ ಕಂಪನಿಯು ತನ್ನ ಅಡುಗೆ ಮತ್ತು ಆಹಾರ ವಿತರಣಾ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮುಚ್ಚಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು.
“ದುರದೃಷ್ಟವಶಾತ್ ಮುಂದಿನ ಕೆಲವು ದಿನಗಳಲ್ಲಿ ನಗರಗಳು ಮತ್ತು ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ವಿವಿಧ ಶ್ರೇಣಿಯ ನಮ್ಮ ಕಂಪನಿಯ 1,100 ಉದ್ಯೋಗಿಗಳನ್ನು ಕೈ ಬಿಡುತ್ತಿದ್ದೇವೆ ಎಂದು ಶ್ರೀಹರ್ಷ ತಮ್ಮ ಕಂಪನಿಯ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ಇತ್ತೀಚೆಗಷ್ಟೇ ಜೊಮಾಟೊ ಕೂಡ ತನ್ನ ಕಂಪನಿಯ 13 ಪರ್ಸೆಂಟ್ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಸ್ವಿಗ್ಗಿ ಕೂಡ ಅದೇ ಹಾದಿಯನ್ನು ತುಳಿದಿದೆ.

- Advertisement -
spot_img

Latest News

error: Content is protected !!