Friday, May 17, 2024
Homeತಾಜಾ ಸುದ್ದಿತಾನು ಕಸ ಗುಡಿಸುತ್ತಿದ್ದ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷೆ ಸ್ಥಾನಕ್ಕೇರಿದ ಮಹಿಳೆ

ತಾನು ಕಸ ಗುಡಿಸುತ್ತಿದ್ದ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷೆ ಸ್ಥಾನಕ್ಕೇರಿದ ಮಹಿಳೆ

spot_img
- Advertisement -
- Advertisement -

ಕೇರಳ: ಅದೃಷ್ಟ ಅನ್ನೋದು ಯಾವಾಗ ಯಾರಿಗೆ ಯಾವ ರೂಪದಲ್ಲಿ ಬರುತ್ತೆ ಅಂತಾ ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಇದೇ ರೀತಿ ಕೇರಳದ ಮಹಿಳೆಯೊಬ್ಬರಿಗೆ ಅದೃಷ್ಟ ಒಲಿದು ಬಂದಿದೆ.

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಸ ಗುಡಿಸಿ, ಧೂಳು ಹಿಡಿದ ಚೇರನ್ನು ಶುಚಿಗೊಳಿಸುವ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಇಂದು ಅದೇ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸ್ಥಾನಕ್ಕೇರುವ ಮೂಲಕ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.

ಎ. ಆನಂದವಳ್ಳಿ (40) ಎಂಬಾಕೆ ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯ ಬ್ಲಾಕ್​ ಪಂಚಾಯಿತಿ ಅಧ್ಯಕ್ಷೆ ಸ್ಥಾನವನ್ನು ಬುಧವಾರ ಅಲಂಕರಿಸಿದರು. ಆನಂದವಳ್ಳಿ ಕಮ್ಯುನಿಷ್ಟ್​ ಪಾರ್ಟಿ ಆಫ್​ ಇಂಡಿಯಾ (ಮಾರ್ಕ್ಸಿಸ್ಟ್​)ದಿಂದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ದಲಿತ ಮಹಿಳೆಯಾಗಿರುವ ಆನಂದವಳ್ಳಿ ಸುಮಾರು 10 ವರ್ಷದಿಂದ ಪಂಚಾಯಿತಿ ಕಚೇರಿಯಲ್ಲಿ ಸ್ವೀಪರ್​ ಆಗಿ ಪಾರ್ಟ್​ ಟೈಮ್​ ಕೆಲಸ ಮಾಡುತ್ತಿದ್ದರು. ಇದೀಗ ಅದೃಷ್ಟ ಖುಲಾಯಿಸಿದ್ದು, ಎಲ್ಲರನ್ನು ಬೆರಗಗೊಳಿಸಿದ್ದಾರೆ.

ಇಂತಹ ವಿಶೇಷತೆಗಳು ನಮ್ಮ ಪಾರ್ಟಿಯಲ್ಲಿ ಮಾತ್ರ ನಡೆಯುತ್ತವೆ. ಈ ಋಣವನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಕಣ್ಣೀರಿಡುತ್ತಲೇ ಆನಂದವಳ್ಳಿ ಅಧ್ಯಕ್ಷೆ ಸ್ಥಾನವನ್ನೇರಿದರು. ಮಾರ್ಕ್ಸಿಸ್ಟ್​ ಬೆಂಬಲಿತ ಕುಟುಂಬದಿಂದ ಬಂದಿರುವ ಆನಂದವಳ್ಳಿ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ. ಆಕೆಯ ಪತಿ ಪೇಂಟರ್​ ಕೆಲಸ ಮಾಡುತ್ತಿದ್ದು, ಪತಿಯೂ ಸಹ ಸಿಪಿಐ (ಎಂ) ನಲ್ಲಿ ತೊಡಗಿಕೊಂಡಿದ್ದಾರೆ. 2011ರಲ್ಲಿ ಆನಂದವಳ್ಳಿ ಗ್ರಾಮ ಪಂಚಾಯಿತಿಗೆ ತಿಂಗಳಿಗೆ 2000 ರೂ.ಗೆ ಸ್ವೀಪರ್​ ಕೆಲಸಕ್ಕೆ ಸೇರಿದಳು. ಇದೀಗ ಕೆಲಸಕ್ಕೆ ರಾಜೀನಾಮೆ ನೀಡಿರುವ ಆನಂದವಳ್ಳಿ ಅಧ್ಯಕ್ಷೆ ಗಾದಿಯನ್ನು ಏರಿದ್ದಾಳೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 654 ಮತಗಳಲ್ಲಿ ಥಲವೂರ್​ ವಿಭಾಗದಲ್ಲಿ ಗೆಲವು ಸಾಧಿಸಿದ್ದಾರೆ. ಸದ್ಯ ನನಗೀಗ ಭಾರಿ ಜವಬ್ದಾರಿ ಇದೆ. ನನ್ನ ಬ್ಲಾಕ್​ನಲ್ಲಿರುವ ಜನರ ಕಲ್ಯಾಣಕ್ಕೆ ಕಷ್ಟಪಟ್ಟು ದುಡಿಯುತ್ತೇನೆಂದು ಆನಂದವಳ್ಳಿ ಭರವಸೆ ನೀಡಿದ್ದಾರೆ. 

- Advertisement -
spot_img

Latest News

error: Content is protected !!