Thursday, June 4, 2026
Homeತಾಜಾ ಸುದ್ದಿಅನಗತ್ಯವಾಗಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ- ವೈದ್ಯನಿಗೆ ಕೋರ್ಟ್ ನೀಡಿದ್ದು 465 ವರ್ಷಗಳ ಜೈಲು ಶಿಕ್ಷೆ!..

ಅನಗತ್ಯವಾಗಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ- ವೈದ್ಯನಿಗೆ ಕೋರ್ಟ್ ನೀಡಿದ್ದು 465 ವರ್ಷಗಳ ಜೈಲು ಶಿಕ್ಷೆ!..

- Advertisement -
- Advertisement -

ವರ್ಜೀನಿಯಾ: ಅಮೆರಿಕಾದ ವರ್ಜೀನಿಯಾದಲ್ಲಿ. ಡಾ. ಜಾವೇದ್ ಪರ್ವೇಜ್ ಎಂಬ ವೈದ್ಯ ಅನಗತ್ಯವಾಗಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದ ಕಾರಣ ಆತನಿಗೆ ಶಿಕ್ಷೆಯಾಗಿದೆ. ಕೋರ್ಟ್ ಬರೋಬ್ಬರಿ 465 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಗರ್ಭಿಣಿಯರ ಸಾಮಾನ್ಯ ಹೆರಿಗೆಗೆ ಕಾಯದೆ ಆಪರೇಷನ್ ಮಾಡಿಸುತ್ತಿದ್ದ ಎನ್ನಲಾಗಿದೆ.

ಈತನ ಕೆಲಸದಿಂದ ವಿಮೆ ಕಂಪನಿಗಳಿಗೆ ಸಾಕಷ್ಟು ನಷ್ಟವಾಗಿದೆ. ಡಾ. ಜಾವೇದ್ ಪರ್ವೇಜ್, ಶಸ್ತ್ರ ಚಿಕಿತ್ಸೆ ಅಗತ್ಯವಿಲ್ಲದ ಮಹಿಳೆಯರನ್ನು ಬೆದರಿಸಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡ್ತಿದ್ದನಂತೆ. ಈತ ಖಾಸಗಿ ಹಾಗೂ ಸರ್ಕಾರಿ ವಿಮೆ ಕಂಪನಿಗಳಲ್ಲಿ ಕೋಟ್ಯಾಂತರ ರೂಪಾಯಿ ಬಿಲ್ ತೋರಿಸಿ ಸಾಕಷ್ಟು ಗಳಿಕೆ ಮಾಡಿದ್ದಾನೆ ಎನ್ನಲಾಗಿದೆ. ಕ್ಯಾನ್ಸರ್ ತಪ್ಪಿಸಲು ಶಸ್ತ್ರಚಿಕಿತ್ಸೆ ಅನಿವಾರ್ಯವೆಂದು ಜನರಿಗೆ ಸಲಹೆ ನೀಡುತ್ತಿದ್ದನಂತೆ.ಈತನ ತಪ್ಪು ಸಾಭೀತಾದ ಹಿನ್ನಲೆಯಲ್ಲಿ ಕೋರ್ಟ್ 465 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

- Advertisement -

Latest News

error: Content is protected !!