Friday, May 3, 2024
Homeಕರಾವಳಿಕ್ಯಾನ್ಸರ್ ಕಾಯಿಲೆ ಇರುವ ರೋಗಿಗೆ ಎ.ಜೆ. ಆಸ್ಪತ್ರೆಯಲ್ಲಿ ರೋಬೋಟಿಕ್ ವಿಪ್ಪಲ್ ಶಸ್ತ್ರಚಿಕಿತ್ಸೆ ಯಶಸ್ವಿ

ಕ್ಯಾನ್ಸರ್ ಕಾಯಿಲೆ ಇರುವ ರೋಗಿಗೆ ಎ.ಜೆ. ಆಸ್ಪತ್ರೆಯಲ್ಲಿ ರೋಬೋಟಿಕ್ ವಿಪ್ಪಲ್ ಶಸ್ತ್ರಚಿಕಿತ್ಸೆ ಯಶಸ್ವಿ

spot_img
- Advertisement -
- Advertisement -

ಮಂಗಳೂರು: ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಕಾಯಿಲೆ ಇರುವ ರೋಗಿಗೆ ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಯಲ್ಲಿ ರೋಬೋಟಿಕ್ ವಿಪ್ಪಲ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ .

ಇದು ಕರಾವಳಿ ಕರ್ನಾಟಕದ ಮೊತ್ತಮೊದಲ ರೋಬೋಟಿಕ್ ವಿಪ್ಪಲ್ ಶಸ್ತ್ರಚಿಕಿತ್ಸೆಯಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದೆ . ರೋಗಿಯು ಯಾವುದೇ ತೊಂದರೆಗಳಿಲ್ಲದೆ ಶಸ್ತ್ರಚಿಕಿತ್ಸೆಯ ನಂತರ ಕೇವಲ 7 ದಿನಗಳೊಳಗೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ .

ಸುಳ್ಯ ತಾಲೂಕಿನ 65 ವರ್ಷದ ವ್ಯಕ್ತಿ ಒಬ್ಬರಿಗೆ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಇರುವುದು ತಿಳಿದು ಬಂದಿತ್ತು.

ಹಾಗಾಗಿ ರೋಗಿಗೆ ವಿಪ್ಪಲ್ ಪಿಡಿ ಎಂಬ ಸಂಕಿರ್ಣ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿತ್ತು , ಈ ನಿಟ್ಟಿನಲ್ಲಿ ಅತ್ಯಾಧುನಿಕ ರೋಬೋಟ್‌ನೊಂದಿಗೆ ಎ.ಜೆ. ಆಸ್ಪತ್ರೆಯ ಗ್ಯಾಸ್ಟೋ ಅಂಕೊ ಸರ್ಜನ್ ಗಳಾದ ಡಾ . ರೋಹನ್ ಶೆಟ್ಟಿ ಮತ್ತು ಡಾ . ಅಶ್ವಿನ್ ಆಳ್ವ , ಅರಿವಳಿಕೆ ತಜ್ಞ ಡಾ . ಹರೀಶ್ ಕಾರಂತ್ ಮತ್ತು ವೈದ್ಯಕೀಯ ಗ್ಯಾಸ್ಟೋಎಂಟರಾಜಿಸ್ಟ್ ಡಾ . ರಾಘವೇಂದ್ರ ಪ್ರಸಾದ್ ಅವರನ್ನು ಒಳಗೊಂಡ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

- Advertisement -
spot_img

Latest News

error: Content is protected !!