Thursday, April 25, 2024
Homeತಾಜಾ ಸುದ್ದಿಗ್ರಾ.ಪಂ.ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗೆ 2.38 ಲಕ್ಷ ರೂ.ಗಳ ಬೈಕ್ ನ್ನು ಉಡುಗೊರೆಯಾಗಿ ನೀಡಿದ...

ಗ್ರಾ.ಪಂ.ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗೆ 2.38 ಲಕ್ಷ ರೂ.ಗಳ ಬೈಕ್ ನ್ನು ಉಡುಗೊರೆಯಾಗಿ ನೀಡಿದ ಬೆಂಬಲಿಗರು

spot_img
- Advertisement -
- Advertisement -

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೂರನೇ ಬಾರಿ ಗೆಲುವು ಸಾಧಿಸಿದ ಅಭ್ಯರ್ಥಿಯೋರ್ವರಿಗೆ ಬೆಂಬಲಿಗರ ತಂಡವೊಂದು ರಾಯಲ್‌ ಎನ್‌ಫೀಲ್ಡ್‌ ಮೆಟಿಯೋರ್‌ ಬೈಕ್‌ನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದಾರೆ.

ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ತಾವರೆಕಟ್ಟೆ ಮೋಳೆಯ ಬಿಜೆಪಿ ಬೆಂಬಲಿತ ಸದಸ್ಯ ಎಸ್. ಮಹೇಶ್ ಕಳೆದೆರಡು ಅವಧಿಯಲ್ಲಿ ಸದಸ್ಯನಾಗಿ ಆಯ್ಕೆಯಾಗಿದ್ದು, ಇದೀಗ ಈ ಬಾರಿಯೂ ನಡೆದ ಚುನಾವಣೆಯಲ್ಲಿ ಮತ್ತೆ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.

ತಮ್ಮ ಸ್ನೇಹಿತ ಗೆದ್ದ ಖುಷಿಗೆ ಮಹೇಶ್ ಬೆಂಬಲಿಗರೆಲ್ಲ ಸೇರಿ ತಮ್ಮ ಯಥಾನುಶಕ್ತಿ ಹಣ ಸಂಗ್ರಹಿಸಿ. 1 ಲಕ್ಷ ರೂ. ಮೊತ್ತ ಮಾಡಿ ಮಹೇಶ್‌ಗೆ ಬೈಕ್ ಕೊಳ್ಳಲು ನೀಡಿದ್ದಾರೆ. 2.38 ಲಕ್ಷ ರೂ.ಗಳ ರಾಯಲ್ ಎನ್‌ಫೀಲ್‌ಡ್, ಮೀಟಿಯೋರ್ ಸೂಪರ್‌ನೋವಾ ಮಾಡೆಲ್ ಅನ್ನು ಮಹೇಶ್ ಖರೀದಿಸಿದ್ದಾರೆ. 80 ಸಾವಿರ ರೂ.ಗಳನ್ನು ಡೌನ್‌ಪೇಮೆಂಟ್ ಆಗಿ ನೀಡಿ ಬೈಕ್ ಖರೀದಿಸಿದ್ದು ಉಳಿದ ಹಣವನ್ನು ಇಎಂಐ ಮೂಲಕ ಪಾವತಿಸುವುದಾಗಿ ತಿಳಿಸಿದ್ದಾರೆ. ಮಹೇಶ್ ಅವರ ಪತ್ನಿ ಕಾಂತಾಮಣಿ ಅವರು ತಾಲೂಕು ಪಂಚಾಯಿತಿ ಸದಸ್ಯೆಯಾಗಿದ್ದಾರೆ.

- Advertisement -
spot_img

Latest News

error: Content is protected !!