Sunday, June 29, 2025
Homeಕರಾವಳಿಬಂಟ್ವಾಳ: ಕುಡಿಯುವ ನೀರಿನ ಪೂರೈಕೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ - ಮೇಯರ್ ಪ್ರೇಮಾನಂದ ಶೆಟ್ಟಿ

ಬಂಟ್ವಾಳ: ಕುಡಿಯುವ ನೀರಿನ ಪೂರೈಕೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ – ಮೇಯರ್ ಪ್ರೇಮಾನಂದ ಶೆಟ್ಟಿ

spot_img
- Advertisement -
- Advertisement -

ಬಂಟ್ವಾಳ: ಮುಂದಿನ ಎರಡು ತಿಂಗಳ ಅವಧಿಯಲ್ಲಿ ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ನೀರಿನ ಪೂರೈಕೆಯು ಮಂಗಳೂರು ಮಹಾನಗರ ಪಾಲಿಕೆಗೆ ಸವಾಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.

ಎಂಸಿಸಿ ವ್ಯಾಪ್ತಿಗೆ ಕುಡಿಯುವ ನೀರಿನ ಮೂಲವಾದ ನೇತ್ರಾವತಿ ನದಿಯ ದಡದಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಬೇಸಿಗೆಯ ಕಾರಣದಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎರಡ್ಮೂರು ತಿಂಗಳಿಗೆ ಸಾಕಾಗುವಷ್ಟು ನೀರು ಸಂಗ್ರಹಿಸಲಾಗಿದೆ. ಆದರೆ ನೀರನ್ನು ಮಿತವಾಗಿ ಬಳಸಿ’ ಎಂದು ಮನವಿ ಮಾಡಿದರು.

ಉಪಮೇಯರ್ ಸುಮಂಗಲಾ ರಾವ್,ಕಾರ್ಪೊರೇಟರ್‌ಗಳಾದ ದಿವಾಕರ್ ಪಾಂಡೇಶ್ವರ್, ಶಶಿಧರ್ ಹೆಗ್ಡೆ, ಭಾಸ್ಕರ್ ಕೆ, ಲೀಲಾವತಿ ಪ್ರಕಾಶ್, ಗಣೇಶ್ ಕುಲಾಲ್, ಮನೋಹರ್ ಕದ್ರಿ, ಕಿರಣ್ ಕೋಡಿಕಲ್, ಸುಧೀರ್ ಶೆಟ್ಟಿ ಕಣ್ಣೂರು, ಶೋಭಾ ರಾಜೇಶ್, ಲೋಕೇಶ್, ಮನೋಜ್ ಕಿಶೋರ್ ಕೊಠಾರಿ, ರಂಜಿನಿ ಕೋಟ್ಯಾನ್, ಶಕಿಲಾ ಬಾವ, ಜಯಶ್ರಿ, ಸಂದೀಪ್ ಗರೋಡಿ, ವೀಣಾ ಮಂಗಲ, ಜಗದೀಶ್ ಶೆಟ್ಟಿ ಬೋಳಾರ್, ತುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್, ಎಂಸಿಸಿ ಆಯುಕ್ತ ಅಕ್ಷಯ್ ಶ್ರೀಧರ್, ಚೇತನ್, ಎಇ ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!