Wednesday, June 24, 2026
HomeWorld14 ಕೆಜಿ ಬದಲಿಗೆ 10 ಕೆಜಿ ಎಲ್‌ಪಿಜಿ ಪೂರೈಕೆ; ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ...

14 ಕೆಜಿ ಬದಲಿಗೆ 10 ಕೆಜಿ ಎಲ್‌ಪಿಜಿ ಪೂರೈಕೆ; ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ ಪ್ಲಾನ್..!

- Advertisement -
- Advertisement -

ಹಾರ್ಮುಜ್ ಜಲಸಂಧಿ ಬಿಕ್ಕಟ್ಟು ಆಮದುಗಳ ಮೇಲೆ ಪರಿಣಾಮ ಬೀರಿರುವುದರಿಂದ ಭಾರತ 10 ಕೆಜಿ ಎಲ್‌ಪಿಜಿ ಪೂರೈಕೆ ಯೋಜನೆ ಜಾರಿಗೆ ಮುಂದಾಗಿದೆ.

ಭಾರತದಲ್ಲಿ ಗೃಹಬಳಕೆಯ ಸಿಲಿಂಡರ್‌ಗಳಿಗಾಗಿ ಪ್ರತಿದಿನ ಸರಾಸರಿ 80,400 ಟನ್ ಎಲ್‌ಪಿಜಿ ಅಗತ್ಯವಿದ್ದು, ವಾಣಿಜ್ಯ ಮತ್ತು ಗೃಹಬಳಕೆ ಸೇರಿ ದೇಶದಲ್ಲಿ ದಿನವೊಂದಕ್ಕೆ ಒಟ್ಟು 93,500 ಟನ್ ಎಲ್‌ಪಿಜಿ ಬೇಕಾಗುತ್ತದೆ. ಪ್ರಸ್ತುತ ಅಗತ್ಯವಿರುವ ಪ್ರಮಾಣದಲ್ಲಿ ಎಲ್‌ಪಿಜಿ ಪೂರೈಕೆ ಮಾಡಲು ಸಾಧ್ಯವಾಗದೇ ಇದ್ದು, ಹೀಗಾಗಿ ಸಿಲಿಂಡರ್ ತೂಕವನ್ನು 14.2 ಕೆ.ಜಿ.ಯಿಂದ 10 ಕೆ.ಜಿ.ಗೆ ಇಳಿಸುವ ಯೋಜನೆಯನ್ನು ಮಾಡಲಾಗಿದೆ. ಅಷ್ಟೇ ಅಲ್ಲದೆ ಸದ್ಯಕ್ಕೆ ಲಭ್ಯವಿರುವ ಅನಿಲವನ್ನು ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗುತ್ತದೆ ಎಂಬುದು ತೈಲ ಕಂಪನಿಗಳ ಲೆಕ್ಕಾಚಾರವಾಗಿದೆ.

ಇನ್ನು ಮುಖ್ಯವಾಗಿ 10 ಕೆ.ಜಿ. ಸಿಲಿಂಡರ್‌ಗೆ ಅದರಲ್ಲಿರುವ ಅನಿಲದ ಪ್ರಮಾಣಕ್ಕೆ ತಕ್ಕಷ್ಟು ಮಾತ್ರವೇ ಹಣ ಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

- Advertisement -

Latest News

error: Content is protected !!