ಬೆಳ್ತಂಗಡಿ: ಸವಣಾಲಿನ ಶ್ರೀ ದುರ್ಗಾಕಾಳಿಕಾಂಬ ದೇವಸ್ಥಾನದ ಕಾಳಿ ಕ್ಷೇತ್ರದಲ್ಲಿ ಏಪ್ರಿಲ್ 3, 2026ರ ಶುಕ್ರವಾರದಂದು ಯಕ್ಷಗಾನ ಬಯಲಾಟ ಸೇವೆ ಜರುಗಲಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸೇವಾ ಸಮಿತಿ, ಸವಣಾಲು ಇವರ ವತಿಯಿಂದ 8ನೇ ವರ್ಷದ ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಂದು ಸಂಜೆ 6.00 ಗಂಟೆಯಿಂದ ರಾತ್ರಿ 12.30ರ ವರೆಗೆ ಶ್ರೀ ಕಟೀಲು ಮೇಳದವರಿಂದ ‘ಮಾನಿಷಾದ’ ಎಂಬ ಪುಣ್ಯಕಥಾ ಪ್ರಸಂಗ ಪ್ರದರ್ಶನಗೊಳ್ಳಲಿದೆ.

ದಿನದ ಕಾರ್ಯಕ್ರಮಗಳ ವಿವರ ಹೀಗಿದೆ; ಬೆಳಿಗ್ಗೆ 9.00ಕ್ಕೆ: ಮೇಳದ ದೇವರ ಪೂಜೆ ನಡೆಯಲಿದ್ದು, ಸಂಜೆ 5.45ಕ್ಕೆ ಚೌಕಿಯಲ್ಲಿ ಮೇಳದ ದೇವರ ಪೂಜೆ ಹಾಗೂ ರಾತ್ರಿ 8.00ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಇರಲಿದೆ
ಈ ಕಲಾ ಸೇವೆಯಲ್ಲಿ ಭಗವದ್ಭಕ್ತರು ಮತ್ತು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸಂಚಾಲಕರು ಹಾಗೂ ಗೌರವ ಸಲಹೆಗಾರರು ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸೇವಾ ಸಮಿತಿ, ಸವಣಾಲು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


