ಕರೋನಾ ಕಾರಣದಿಂದಾಗಿ ಅನಿವಾರ್ಯವಾಗಿ ಗೃಹಬಂಧನಕ್ಕೆ ಒಳಗಾಗಿರುವವರಿಗೆ, ಅದರಲ್ಲೂ ನಿರ್ದಿಷ್ಟವಾಗಿ ಪಡ್ಡೆಹುಡುಗರಿಗೆ ಮಾದಕನಟಿ ಸನ್ನಿ ಲಿಯೋನ್ ಸ್ಫೂರ್ತಿಯ ಬೆಡಗಿಯಾಗಿಬಿಟ್ಟಿದ್ದಾಳೆ. ಸೋಷಿಯಲ್ ಮೀಡಿಯಾಗಳಲ್ಲಿ ವಿವಿಧ ಭಂಗಿಯ ತಮ್ಮ ಚಿತ್ರಗಳನ್ನು ಅವರು ಪ್ರತಿದಿನ ಅಪ್‌ಲೋಡ್ ಮಾಡುತ್ತಿರುವುದು ಇದಕ್ಕೆ ಸಾಕ್ಷಿ.
ಜತೆಗೆ, ಆಯ್ದ ಅತಿಥಿಗಳೊಂದಿಗೆ ಲೈವ್ ವಿಡಿಯೋ ಚಾಟ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಸನ್ನಿಯ ಈ ನಡೆಗೆ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ. ಜತೆಗೆ ತಮಗಿಷ್ಟ ಬಂದಂತೆ ಕಮೆಂಟುಗಳನ್ನೂ ಹಾಕುತ್ತ, ಗೃಹಬಂಧನವನ್ನು ಎಂಜಾಯ್ ಮಾಡುತ್ತಿದ್ದಾರೆ.
ಬೇಸಿಗೆ ಹಿನ್ನೆಲೆಯಲ್ಲಿ ನೀರಿನಲ್ಲಿ ಕುಳಿತಿದ್ದ ಫೋಟೋವನ್ನು ಕೆಲದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಸನ್ನಿ, ಇತ್ತೀಚೆಗೆ ಬಿಕಿನಿ ತೊಟ್ಟು ಕಪ್ಪುಕುದುರೆಯನ್ನೇರಿ ಕುಳಿತಿರುವ ಮಾದಕ ಫೋಟೋವನ್ನು ಶೇರ್ ಮಾಡಿದ್ದರು. ಈ ಬೋಲ್ಡ್ ಅವತಾರಕ್ಕೆ ಕರಗಿ ನೀರಾಗಿರುವ ಪಡ್ಡೆಗಳು, ಬಾಯಿ ಚಪ್ಪರಿಸಿಕೊಂಡು ಕಮೆಂಟ್ ಹಾಕುತ್ತಿದ್ದು ಅದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕರೋನಾ ವೈರಸ್ ಕಾರಣದಿಂದಾಗಿ ಯಾರಿಗೆಲ್ಲಾ ಸಮಸ್ಯೆಯಾಯಿತೋ ಬಿಟ್ಟಿತೋ ಗೊತ್ತಿಲ್ಲ. ಆದರೆ ಸನ್ನಿ ಲಿಯೋನ್ ಅಭಿಮಾನಿಗಳಿಗಂತೂ ಭರಪೂರ ಮನರಂಜನೆ ಎಂಬುದಂತೂ ದಿಟ. ಹೀಗಾಗಿ ‘ನಷ್ಟವೇನೂ ಆಗಿಲ್ಲ, ಪೈಸಾ ವಸೂಲ್’ ಎಂದು ಇಂಥ ಪಡ್ಡೆಹುಡುಗರು ಬಾಯಿ ಚಪ್ಪರಿಸುತ್ತಿರುವುದು ಇನ್ನೂ ಸುದ್ದಿಯಾಗಿಲ್ಲ!