Wednesday, July 3, 2024
Homeಕರಾವಳಿಸುಳ್ಯದ ಗುತ್ತಿಗಾರಿನಲ್ಲಿ ಕೂಲಿ ಕೆಲಸಕ್ಕೆ ಹೊರಟ ಮಹಿಳೆಯಿಂದ ಧ್ವಜ ವಂದನೆ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು...

ಸುಳ್ಯದ ಗುತ್ತಿಗಾರಿನಲ್ಲಿ ಕೂಲಿ ಕೆಲಸಕ್ಕೆ ಹೊರಟ ಮಹಿಳೆಯಿಂದ ಧ್ವಜ ವಂದನೆ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಫೋಟೋ

spot_img
- Advertisement -
- Advertisement -

ಸುಳ್ಯ : ನಿನ್ನೆ ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಇನ್ನು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ  ಮೊಗ್ರದ ಏರಣಗುಡ್ಡೆ ಎಂಬಲ್ಲಿ ಗಾಂಧಿ ವೇದಿಕೆಯ ಸುಳ್ಯ ಘಟಕದ ವತಿಯಿಂದಸ್ವಾತ್ರಂತ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಈ ವೇಳೆ ಕೂಲಿ ಕೆಲಸಕ್ಕೆ ಹೊರಟ ಮಹಿಳೆಯೊಬ್ಬರು ಕೈಯಲ್ಲಿ ಕತ್ತಿ ಹಾಗೂ ಪ್ಲಾಸ್ಟಿಕ್ ಗೊರಬೆ ಹಿಡಿದುಕೊಂಡೇ ಧ್ವಜವಂದನೆ ಸಲ್ಲಿಸಿದ್ದಾರೆ. ಇನ್ನು ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ಫೋಟೋವನ್ನು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು “ಸುಳ್ಯದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಮುಗಿದು ಅತಿಥಿಗಳು ಹೊರಟಿದ್ದರಂತೆ. ಆ ಹೊತ್ತಿಗೆ ತನ್ನ ದೈನಂದಿನ ಕೆಲಸಕ್ಕೆ ಹೊರಟಿದ್ದ ಮಾತೆಯೊಬ್ಬರು ರಾಷ್ಟ್ರಧ್ವಜವನ್ನು ಕಂಡು, ಚಪ್ಪಲಿ ತೆಗೆದು ತನ್ನ ನಿತ್ಯಕಾಯಕದ ಆಯುಧ, ಕತ್ತಿಯನ್ನು, ಹಿಡಿದುಕೊಂಡೇ ಧ್ವಜಕ್ಕೆ ಸೆಲ್ಯೂಟ್ ಮಾಡಿ ತನ್ನ ಪಾಡಿಗೆ ಕೆಲಸಕ್ಕೆ ಹೊರಟು ಹೋದರಂತೆ.ಇದು ಭಾರತ… ಇದು ಸಂಭ್ರಮ… ಇದು ಶ್ರದ್ಧೆ… ಇದು ಭಕ್ತಿ…” ಎಂದು ಬರೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!