Friday, June 5, 2026
Homeಕರಾವಳಿಸಚಿವರಾದ್ರೂ ಸರಳತೆ ಬಿಡದ ಎಸ್ ಅಂಗಾರ: ಸಣ್ಣ ಹೋಟೆಲ್ ನಲ್ಲಿ ಸಚಿವರು ಟೀ ಕುಡಿಯುತ್ತಿರುವ ಫೋಟೋ...

ಸಚಿವರಾದ್ರೂ ಸರಳತೆ ಬಿಡದ ಎಸ್ ಅಂಗಾರ: ಸಣ್ಣ ಹೋಟೆಲ್ ನಲ್ಲಿ ಸಚಿವರು ಟೀ ಕುಡಿಯುತ್ತಿರುವ ಫೋಟೋ ವೈರಲ್

- Advertisement -
- Advertisement -

ಸುಳ್ಯ: ಶಾಸಕ ಅಂಗಾರ ಅವರು ಸಚಿವರಾಗಿರೋದು ಕರಾವಳಿಯ ಜನರಲ್ಲಿ ಸಂಭ್ರಮ ಮೂಡಿಸಿದೆ. ಅದಕ್ಕೆ ಕಾರಣ ಅವರ ಸರಳ ವ್ಯಕ್ತಿತ್ವ. ಅಂಗಾರ ಅವರು ತಮ್ಮ ಸರಳ ವ್ಯಕ್ತಿತ್ವದ ಮೂಲಕವೇ ಜನರ ಮನಸ್ಸು ಗೆದ್ದವರು. 6 ಬಾರಿ ಗೆದ್ದ ಒಬ್ಬ ಶಾಸಕರು ಇಷ್ಟು ಸರಳವಾಗಿ ಇರ್ತಾರಾ ಅನ್ನೋ ಪ್ರಶ್ನೆಗೆ ಉತ್ತರವಾಗಿ ಬದುಕುತ್ತಿರುವವರು ಸುಳ್ಯದ ಅಪ್ಪಟ ಬಂಗಾರ ಎಸ್ ಅಂಗಾರ ಅವರು.

ಇನ್ನು ಮೊನ್ನೆಯಷ್ಟೇ ಅಂಗಾರ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಿನಿಸ್ಟರ್ ಆದ್ರೂ ಕೂಡ ಅವರು ತಮ್ಮ ಸರಳತೆಯ ಗುಣವನ್ನು ಮರೆತಿಲ್ಲ. ನಿನ್ನೆ ಮಂಗಳೂರಿನಿಂದ ಅವರು ಸುಳ್ಯಕ್ಕೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಎಂದಿನಂತೆ ಸಣ್ಣ ಹೋಟೆಲ್ ನಲ್ಲಿ ಟೀ ಕುಡಿದಿದ್ದಾರೆ.

ಕನಕಮಜಲಿನಿಂದ ಸ್ವಲ್ಪ ಮುಂದೆ ಅಮ್ಚಿನಡ್ಕ ಎಂಬಲ್ಲಿರುವ ಸಣ್ಣ ಹೋಟೆಲ್ ನಲ್ಲಿ ಕಲ್ತಪ್ಪ ತಿಂದು, ಟೀ ಕುಡಿದಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾದುತ್ತಿದೆ. ಅಲ್ಲದೇ ಅನೇಕರು ಅಂಗಾರ ಅವರನ್ನು ಒಡಿಸ್ಸಾದ ಬಾಲಸೋರ್ ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರಿಗೆ ಹೋಲಿಸಿದ್ದಾರೆ.

- Advertisement -

Latest News

error: Content is protected !!