Friday, October 4, 2024
Homeಕರಾವಳಿಕಾಸರಗೋಡುಸುಳ್ಯ: ಸರ್ಕಾರಿ ವೈದ್ಯರು ಅಗೌರವ ತೋರಿದ್ದಾರೆಂದು ದೂರು ನೀಡಿದ ನ್ಯಾಯಾಧೀಶರು

ಸುಳ್ಯ: ಸರ್ಕಾರಿ ವೈದ್ಯರು ಅಗೌರವ ತೋರಿದ್ದಾರೆಂದು ದೂರು ನೀಡಿದ ನ್ಯಾಯಾಧೀಶರು

spot_img
- Advertisement -
- Advertisement -

ಸುಳ್ಯ ಸರ್ಕಾರಿಯ ಹಿರಿಯ ವೈದ್ಯರು ನಾನು ಕೇಳಿದ ಮಾಹಿತಿ ನನಗೆ ಸರಿಯಾಗಿ ನೀಡದೆ ಅಗೌರವ ತೋರಿದ್ದಾರೆಂದು ನ್ಯಾಯಾಧೀಶರು ದೂರು ನೀರುವ ಘಟನೆ ಸುಳ್ಯದಲ್ಲಿ ನಡೆದಿದೆ.

ಕಾಸರಗೋಡಿನ ದೇಲಂಪಾಡಿಯ ಮಹಿಳೆಯೋರ್ವರು ಆತ್ಮಹತ್ಯೆ ಯತ್ನಿಸಿದ್ದರು. ಅವರನ್ನು ಶನಿವಾರ ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಲಾಗಿತ್ತು. ಕೇರಳ ಹೈಕೋರ್ಟ್ ಆದೇಶದ ಪ್ರಕಾರ ಆತ್ಮಹತ್ಯೆಗೆ ಯತ್ನಿಸಿದವರ ಹೇಳಿಕೆಯನ್ನು ಜಿಲ್ಲಾ ನ್ಯಾಯಾಧೀಶರು ಹೋಗಿ ಪಡೆಯಬೇಕಿರುವುದರಿಂದ ಕಾಸರಗೋಡು ಜಿಲ್ಲಾ ನ್ಯಾಯಾಧೀಶರಾದ ಅಬ್ದುಲ್ ಬಾತಿಷ್ ಸೆ.21 ರಂದು ರಾತ್ರಿ ಸುಳ್ಯ ಆಸ್ಪತ್ರೆಗೆ ಬಂದಿದ್ದರು. ನ್ಯಾಯಾಧೀಶರು ಬರುವಾಗ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರಾಗಿದ್ದ ಡಾ.ವಿನ್ಯಾಸ್ ಕರ್ತವ್ಯದಲ್ಲಿದ್ದರು. ನ್ಯಾಯಾಧೀಶರು ಬಂದು ಮಾಹಿತಿ ಕೇಳಿದಾಗ ಹಿರಿಯ ಡಾಕ್ಟರ್ ಬರಬೇಕು. ಅವರೇ ಮಾಹಿತಿ ನೀಡಬೇಕಿದೆ ಎಂದು ವಿನ್ಯಾಸ್ ಹೇಳಿದ್ದಾರೆ. ಈ ವೇಳೆ ಆಗಮಿಸಿದ ಹಿರಿಯ ವೈದ್ಯೆ ಡಾ.ಸೌಮ್ಯ ರವರು ನ್ಯಾಯಾಧೀಶರಿಗೆ ಮಾಹಿತಿ ನೀಡಲು ನಿರಾಕರಿಸಿದರೆನ್ನಲಾಗಿದೆ. ನೀವು ಲಿಖಿತವಾಗಿ ವಿನಂತಿ ನೀಡಿದರೆ ಮಾತ್ರ ಕೊಡಲು ಸಾಧ್ಯ ಎಂದಿದ್ದಾರೆ. ಇದರಿಂದ ಕೋಪಗೊಂಡ ನ್ಯಾಯಾಧೀಶರು ಆಸ್ಪತ್ರೆಗೆ ನ್ಯಾಯಾಧೀಶರು ಬರುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೂ ಮಾಹಿತಿ ನೀಡದೆ ಅಗೌರವದಿಂದ ನಡೆಸಿಕೊಂಡಿದ್ದಾರೆ ಮತ್ತು ಉದ್ದಟತನ ತೋರಿದ್ದಾರೆಂದು ನ್ಯಾಯಾಧೀಶರಾದ ಅಬ್ದುಲ್ ಬಾಷಿತ್ ಅವರು ಸುಳ್ಯ ಪೊಲೀಸ್ ಠಾಣೆಗೆ ಬಂದು ವೈದ್ಯರುಗಳ ವಿರುದ್ಧ ದೂರು ನೀಡಿದರು. ಬೆಳಿಗ್ಗೆವರೆಗೆ ಪೊಲೀಸ್ ಠಾಣೆಯಲ್ಲಿ ಕಾದು ಕುಳಿತು ಕೇಸು ದಾಖಲಾದ ಬಗೆಗಿನ ದಾಖಲೆ ಪಡೆದುಕೊಂಡು ನ್ಯಾಯಾಧೀಶರು ಕಾಸರಗೋಡಿಗೆ ತೆರಳಿದ್ದಾರೆ.. ಇಬ್ಬರು ವೈದ್ಯರ ವಿರುದ್ಧ ಕೇಸು ದಾಖಲಿಸಿಕೊಂಡ ಸುಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!