Saturday, May 18, 2024
Homeಕರಾವಳಿಸುಳ್ಯ: ಗೃಹ ಪ್ರವೇಶಕ್ಕೆ ಮಡಿಕೇರಿಯಿಂದ ಆಗಮಿಸಿದ ಕೊರೋನಾ ಸೋಂಕಿತನ ಪತ್ನಿ ಮತ್ತು ಮಗ, ಸ್ಥಳೀಯರಲ್ಲಿ ಹೆಚ್ಚಿದ...

ಸುಳ್ಯ: ಗೃಹ ಪ್ರವೇಶಕ್ಕೆ ಮಡಿಕೇರಿಯಿಂದ ಆಗಮಿಸಿದ ಕೊರೋನಾ ಸೋಂಕಿತನ ಪತ್ನಿ ಮತ್ತು ಮಗ, ಸ್ಥಳೀಯರಲ್ಲಿ ಹೆಚ್ಚಿದ ಆತಂಕ

spot_img
- Advertisement -
- Advertisement -

ಸುಳ್ಯ: ತಾಲೂಕಿನ ಗಡಿ ಗ್ರಾಮವಾದ ಮೆಲ್ಚೆಂಬು ಎಂಬಲ್ಲಿಯ ಗೃಹ ಪ್ರವೇಶ ಕಾರ್ಯಕ್ರಮವೊಂದಕ್ಕೆ ಕೊಡಗಿನ ಕೊರೊನೊ ಪಾಸಿಟಿವ್ ವ್ಯಕ್ತಿಯ ಸಂಬಂಧಿಕರು ಆಗಮಿಸಿದ ಹಿನ್ನಲೆಯಲ್ಲಿ ಸ್ಥಳೀಯಲ್ಲಿ ಹಾಗೂ ದ.ಕ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ.

ಕೊರೊನೊ ಪಾಸಿಟಿವ್ ವ್ಯಕ್ತಿ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮನೆಯವರಿಗೆ ಹೋಮ್ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿತ್ತು.ಆತನ ಸಂಬಂಧಿಕರ ಗೃಹ ಪ್ರವೇಶದ ಕುತ್ತಿ ಪೂಜೆ ಮಂಗಳವಾರ ಹಾಗೂ ಗೃಹ ಪ್ರವೇಶ ಬುಧವಾರ ಮೆಲ್ಚೆಂಬುವಿನಲ್ಲಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಕೊರೊನೊ ಪಾಸಿಟಿವ್ ವ್ಯಕ್ತಿಯ ಹೆಂಡತಿ ಹಾಗೂ ಮಗನನ್ನು ಮನೆಯವರು ತಮ್ಮ ಮಡಿಕೇರಿಯಿಂದ ಕರೆದುಕೊಂಡು ಬಂದಿದ್ದರು. ಕುತ್ತಿಪೂಜೆ ಹಾಗೂ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಸುಮಾರು ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ಮನೆಯವರು ವಾಣಿಜ್ಯ ವ್ಯವಹಾರವನ್ನು ಹೆಚ್ಚಾಗಿ ಸುಳ್ಯ ತಾಲೂಕಿನ ಕಲ್ಲುಗುಂಡಿಯಲ್ಲಿ ನಡೆಸುತ್ತಿದ್ದು ಕೆಲವೊಂದು ವಸ್ತುಗಳನ್ನು ಕುತ್ತಿಪೂಜೆ ದಿವಸ ಕಲ್ಲುಗುಂಡಿಯಿಂದ ಖರೀದಿಸಿದ್ದರು ಎನ್ನಾಲಾಗಿದೆ.ಅಲ್ಲದೆ ಚೆಂಬು ಗ್ರಾಮದವರು ಚೆಂಬು,ಕುರೆಪಾಯ-ಮಾಪಳಕಜೆ ತೊಡಿಕಾನ-ಅರಂತೋಡು ರಸ್ತೆ ಮತ್ತು ಚೆಂಬು-ಪೆತ್ತಾಜೆ-ಅಡ್ಯಡ್ಕ -ಅರಂತೋಡು-ಸುಳ್ಯ ರಸ್ತೆಯ ಮೂಲಕ ಸುಳ್ಯ-ತೊಡಿಕಾನ-ಅರಂತೋಡಿನಲ್ಲಿ ವ್ಯವಹಾರ ನಡೆಸುತ್ತಾರೆ.ಇದರಿಂದ ತೊಡಿಕಾನ-ಅರಂತೋಡು,ಕಲ್ಲುಗುಂಡಿ,ಸಂಪಾಜೆ ಗ್ರಾಮಗಳಿಗೆ ಆತಂಕ ಎದುರಾಗಿದೆ.

ಚೆಂಬು ಗ್ರಾಮ ಪಂಚಾಯತ್ ನಾಗರಿಕ ಹಿತರಕ್ಷಣೆ ವೇದಿಕೆ ವತಿಯಿಂದ ಗೃಹ ಪ್ರವೇಶ ಕಾರ್ಯಕ್ರೆಮಕ್ಕೆ ಆಗಿಸಿದವರನ್ನು ಮುಂದಿನ ಆದೇಶ ಹೋಮ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದ್ದು.ಗ್ರಾಮ ಪಂಚಾಯತ್ ವತಿಯಿಂದ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ಅನುಮತಿಯಲ್ಲದೆ ಕಾರ್ಯಕ್ರಮ ನಡೆಸಿರುವುದದಕ್ಕೆ ಪೊಲೀಸ್ ದೂರು ನೀಡಲಾಗಿದೆ.

- Advertisement -
spot_img

Latest News

error: Content is protected !!