Thursday, May 16, 2024
Homeಕರಾವಳಿಸುಳ್ಯ: ಅನ್ಯಕೋಮಿನ ಮೊಬೈಲ್ ಶಾಪ್ ಮಾಲೀಕನಿಂದ ಹಿಂದೂ ಯುವತಿಯರಿಗಾಗಿ ಸೌಂದರ್ಯ ಸ್ಪರ್ಧೆ

ಸುಳ್ಯ: ಅನ್ಯಕೋಮಿನ ಮೊಬೈಲ್ ಶಾಪ್ ಮಾಲೀಕನಿಂದ ಹಿಂದೂ ಯುವತಿಯರಿಗಾಗಿ ಸೌಂದರ್ಯ ಸ್ಪರ್ಧೆ

spot_img
- Advertisement -
- Advertisement -

ಸುಳ್ಯ: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಮೊಬೈಲ್ ಗ್ಯಾರೇಜ್‘ ಎಂಬ ಹೆಸರಿನ ಮೊಬೈಲ್ ಶಾಪ್ ತನ್ನ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಫೊಟೋ ಸೌಂದರ್ಯ ಸ್ಪರ್ಧೆ ಏರ್ಪಡಿಸಿ ಈಗ ವಿವಾದಕ್ಕೆ ಗುರಿಯಾಗಿದೆ.

ಮುಸ್ಲಿಂ ಹೆಣ್ಣು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಾರದು ಮತ್ತು ಹಿಂದು ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಫೊಟೋ ಸೌಂದರ್ಯ ಸ್ಪರ್ಧೆ ಏರ್ಪಡಿಸಿದೆ ಎನ್ನುವ ಸಂದೇಶವೊಂದು ಅನ್ಯಕೋಮಿನ ಗ್ರೂಪ್ ನಲ್ಲಿ‌ ರವಾನೆಯಾಗುತ್ತಿರುವ ಮಾಹಿತಿ ಹಿಂದೂ ಸಂಘಟನೆಗಳನ್ನು ಗರಂ ಆಗುವಂತೆ ಮಾಡಿದೆ.

Instagram Photo Contest will start tomorrow #mobile_garage_sullia#mobile_garage_sullia_photocontest @ Mobile Garage

Posted by Mobile Garage Sullia on Sunday, 19 July 2020

ಅದರ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೊತೆಗೆ ಇತ್ತೀಚಿಗಿನ ದಿನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ಹೆಣ್ಣು ಮಕ್ಕಳ ಫೊಟೋ ಅಶ್ಲೀಲ ಪೇಜ್ ಮತ್ತು ಫೇಕ್ ಅಕೌಂಟ್ ಗೆ ಬಳಕೆಯಾಗಿ ಅನಾಹುತಕ್ಕೆ‌ ಕಾರಣವಾಗುತ್ತದೆ ಎಂದು ಪೊಲೀಸ್ ಇಲಾಖೆ ಆನೇಕ ಬಾರಿ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಈ ರೀತಿಯ ಅನಗತ್ಯ ಆನ್ಲೈನ್ ಸ್ಪರ್ಧೆಗಳು ಸೈಬರ್ ಕ್ರೈಂಗಳಿಗೆ ನಾವೇ ಅಹ್ವಾನ ನೀಡಿದಂತೆ ಆಗುತ್ತದೆ ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಹೇಳಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಈಗಾಗಲೇ ದೂರು ನೀಡಿರುವ ಅಜಿತ್ ರೈ ಹೊಸಮನೆ, ಅನ್ಯಕೋಮಿನ ವ್ಯಕ್ತಿಯೊಬ್ಬರು ನಡೆಸುವ ಮೊಬೈಲ್ ಸಂಸ್ಥೆಯಿಂದ ನಡೆಯುತ್ತಿರುವ ಈ ಸ್ಪರ್ಧೆಯ ಕುರಿತು ಅನುಮಾನಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಡದಂತೆ ದೂರಿನಲ್ಲಿ ಆಗ್ರಹ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!