
ಸುಬ್ರಮಣ್ಯ; ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮಲಗಿದಲ್ಲಿಯೇ ಸಾ*ವನ್ನಪ್ಪಿರುವ ಘಟನೆ ಪಂಜದಲ್ಲಿ ನಡೆದಿದೆ.ಸುಳ್ಯ ತಾಲೂಕು ಐವತ್ತೋಕ್ಲು ಗ್ರಾಮದ ಧರಣೇಶ ಮೃತ ದುರ್ದೈವಿ.
ಧರಣೇಶ್ ಪಂಜದಲ್ಲಿರುವ ಮಂಗಳ ಬಾರ್‌ನಲ್ಲಿ ಸ್ವಚ್ಚತಾ ಕೆಲಸ ಮಾಡಿಕೊಂಡಿದ್ದು ವಾರಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ಡಿ. 5 ರಂದು ಮನೆಗೆ ಬಂದಿದ್ದು ಅವರಿಗೆ ಸ್ವಲ್ಪ ಜ್ವರವಿದ್ದು ಈ ಬಗ್ಗೆ ಆಸ್ಪತ್ರೆಯಿಂದ ಔಷಧಿ ತೆಗೆದುಕೊಂಡಿದ್ದರು ಬಳಿಕ ಮರುದಿನ ವಾಪಸ್ ಕೆಲಸಕೆಂದು ಬಾರ್‌ಗೆ ಹೋಗಿದ್ದರು.
ಡಿ.7 ರಂದು ಬಾರ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಮನೆಯವರಿಗೆ ದೂರವಾಣಿ ಕರೆ ಮಾಡಿ “ ನಿನ್ನೆ ರಾತ್ರಿ ಸಮಯ ಸುಮಾರು 10 ಗಂಟೆಗೆ ಊಟ ಮಾಡಿ ಮಲಗಿದವರು ಬೆಳಿಗ್ಗೆ ಬಾರ್ ಸ್ವಚ್ಚತಾ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಗುಡಿಸಲು ಹೋದಾಗ ಮಲಗಿದ್ದಲಿಯೇ ಇದ್ದು ಅವರನ್ನು ಕರೆದಾಗ ಏಳದೆ ಯಾವುದೇ ಪ್ರತಿಕ್ರಿಯಸದೆ ಮೃತಪಟ್ಟಂತೆ ಕಂಡು ಬಂದಿರುವುದಾಗಿ ತಿಳಿಸಿದ್ದಾರೆ.
ಮನೆಯವರೊಂದಿಗೆ ಅಲ್ಲಿಗೆ ತೆರಳಿ ನೋಡಿದಾಗ ನನ್ನ ಗಂಡ ಮೃತಪಟ್ಟಿರುವುದು ತಿಳಿದಿದೆ. ಅನಾರೋಗ್ಯದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಮೃತಪಟ್ಟಿರಬಹುದಾಗಿದ್ದು ಎಂದು ಮೃತರ ಪತ್ನಿ ಶ್ರೀಮತಿ ಜಲಜಾಕ್ಷಿ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


