Thursday, June 4, 2026
Homeಕರಾವಳಿಮಂಗಳೂರು: ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು, ವಿದ್ಯಾರ್ಥಿ ಸಾವು

ಮಂಗಳೂರು: ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು, ವಿದ್ಯಾರ್ಥಿ ಸಾವು

- Advertisement -
- Advertisement -

ಮಂಗಳೂರು : ಹಾಸ್ಟೆಲ್ ಕಟ್ಟಡವೊಂದರ ನಾಲ್ಕನೆ ಮಹಡಿಯಿಂದ ವಿದ್ಯಾರ್ಥಿಯೊಬ್ಬ ಬಿದ್ದು ಮೃತಪಟ್ಟ ಘಟನೆ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಸಮೀಪ ಇಂದು ಮಧ್ಯಾಹ್ನ ನಡೆದಿದೆ. ಪ್ರಣವ್ ಎಸ್. ಮೃತಪಟ್ಟ ವಿದ್ಯಾರ್ಥಿ.

ಮೂಲತಃ ಬಿಜಾಪುರದ ಸತೀಶ್ ಎಂಬವರ ಪುತ್ರನಾಗಿರುವ ಈತ ನಗರದ ಕೊಟ್ಟಾರ ಚೌಕಿಯ ಚೈತನ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಇಂದು ಕೆಲವು ಮಕ್ಕಳು ಕ್ರಿಕೆಟ್ ಆಟವಾಡುತ್ತಿದ್ದರು. ಈ ವೇಳೆ ಹಾಸ್ಟೆಲ್ ಕಟ್ಟಡದ ಮೇಲ್ಗಡೆ ಬಾಲ್ ಬಿತ್ತನ್ನೆಲಾಗಿದೆ. ಕಟ್ಟಡದ ನಾಲ್ಕನೆ ಮಹಡಿಯಲ್ಲಿದ್ದ ಪ್ರಣವ್ ಅದನ್ನು ಹೆಕ್ಕುವ ಸಲುವಾಗಿ ಮಹಡಿಗೆ ಅಳವಡಿಸಲಾದ ಶೀಟ್‌ಗೆ ಏರಿದ್ದು, ಈ ಸಂದರ್ಭ ಬಿದ್ದು ಗಂಭೀರ ಗಾಯಗೊಂಡಿದ್ದ. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ .

- Advertisement -

Latest News

error: Content is protected !!