Wednesday, May 15, 2024
Homeಅಪರಾಧಶಾಲೆಗೆ ತಿಂಡಿ ತೆಗೆದುಕೊಂಡು ಹೋಗಿದ್ದಕ್ಕೆ ಮುಖ್ಯೋಪಾಧ್ಯಾಯರಿಂದ ಎಚ್ಚರಿಕೆ: ಮನನೊಂದು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಶಾಲೆಗೆ ತಿಂಡಿ ತೆಗೆದುಕೊಂಡು ಹೋಗಿದ್ದಕ್ಕೆ ಮುಖ್ಯೋಪಾಧ್ಯಾಯರಿಂದ ಎಚ್ಚರಿಕೆ: ಮನನೊಂದು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

spot_img
- Advertisement -
- Advertisement -

ಬೆಂಗಳೂರು: ಶಾಲೆಗೆ ಸ್ನಾಕ್ಸ್( ತಿಂಡಿ) ತೆಗೆದುಕೊಂಡು ಹೋಗಿದ್ದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಪೋಷಕರನ್ನು ಕರೆದು ಎಚ್ಚರಿಕೆ ಕೊಟ್ಟಿದ್ದರಿಂದ ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಶವಂತಪುರ ರೈಲ್ವೆ ಟ್ರಾಕ್‍ನಲ್ಲಿ ನಡೆದಿದೆ. 9 ನೇ ತರಗತಿ ರಮ್ಯಾ ಮೂರ್ತಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ರಮ್ಯಾ ಮೂರ್ತಿ ಟಿ.ದಾಸರಹಳ್ಳಿಯ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಳೆದ ಅಕ್ಟೋಬರ್ ತಿಂಗಳು ರಮ್ಯಾ ಶಾಲೆಗೆ ಸ್ನಾಕ್ಸ್ ತೆಗೆದುಕೊಂಡು ಹೋಗಿದ್ದಳು. ರಮ್ಯಾ ಶಾಲೆಗೆ ಸ್ನಾಕ್ಸ್ ತೆಗೆದುಕೊಂಡು ಹೋಗಿರುವ ವಿಚಾರ ಶಾಲೆ ಶಿಕ್ಷಕರ ಗಮನಕ್ಕೆ ಬಂದು ಪ್ರಾಂಶುಪಾಲರಿಗೆ ವಿಚಾರ ಗೊತ್ತಾಗಿ ವಿದ್ಯಾರ್ಥಿನಿ ಪೋಷಕರಿಗೆ ಕರೆದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು.

ಶಾಲಾ ಆಡಳಿತ ಮಂಡಳಿಯಿಂದ ಅಸಮಾಧಾನಗೊಂಡ ರಮ್ಯಾ ತಾಯಿ ಶಾಲೆ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರಂತೆ. ರಮ್ಯಾ ತಾಯಿ ಶಾಲೆ ವಿರುದ್ಧ ದೂರು ನೀಡಿದ್ದರಿಂದ ಶಾಲೆಯಲ್ಲಿ ವಿದ್ಯಾರ್ಥಿನಿ ರಮ್ಯಾಳಿಗೆ ಕಿರುಕುಳ ಕೊಡುತ್ತಿದ್ದ ಕಾರಣಕ್ಕಾಗಿ ಮನನೊಂದು ನಿನ್ನೆ ಮುಂಜಾನೆ ವಾಕಿಂಗ್ ಹೋಗುವಂತೆ ಹೋಗಿ ರೈಲಿಗೆ ತಲೆಕೊಟ್ಟು ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ವಿದ್ಯಾರ್ಥಿನಿ ಸಾವಿಗೂ ಮುನ್ನ ಬರೆದಿರೋ ಡೆತ್ ನೋಟ್‍ನಲ್ಲಿ ಸಾರಾಂಶ I HATE YOU PRINCIPAL ಹಾಗೂ ಒಂದಷ್ಟು ಸಹಪಾಠಿ ವಿದ್ಯಾರ್ಥಿಗಳ ಹೆಸರು ಬರೆದು I HATE U ALL ಎಂದು ಬರೆದಿದ್ದಾಳೆ. ಘಟನೆ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -
spot_img

Latest News

error: Content is protected !!