Wednesday, June 3, 2026
Homeಕರಾವಳಿಮಂಗಳೂರುಮಂಗಳೂರು; ಸುರತ್ಕಲ್ ನಲ್ಲಿ ಬಾಲಕಿ ಮೇಲೆ ಬೀದಿ ನಾಯಿ ದಾಳಿ

ಮಂಗಳೂರು; ಸುರತ್ಕಲ್ ನಲ್ಲಿ ಬಾಲಕಿ ಮೇಲೆ ಬೀದಿ ನಾಯಿ ದಾಳಿ

- Advertisement -
- Advertisement -

ಮಂಗಳೂರು; ಬಾಲಕಿ ಮೇಲೆ ಬೀದಿ ನಾಯಿ ದಾಳಿ ಮಾಡಿರುವ ಘಟನೆ ಸುರತ್ಕಲ್ ನ ಕಾನ ಮೈದಗುರಿಯಲ್ಲಿ ಬುಧವಾರ ಸಂಜೆ ನಡೆದಿದೆ. ಸುರತ್ಕಲ್‌ ಕಾನ ಮೈಂದಗುರಿ ನಿವಾಸಿ ಹೈದರ್ ಅಲಿ ಅವರ‌ ಮಗಳು ರಿದಾ ಫಾತಿಮಾ (9) ನಾಯಿ ದಾಳಿಗೆ ಒಳಗಾದ ಬಾಲಕಿ.

ಬಾಲಕಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ .ರಿದಾ ಫಾತಿಮ ಸಂಜೆಯ ವೇಳೆ‌ ಮನೆ ಬಳಿಯ ಅಂಗಡಿಗೆ ಹೋಗುತ್ತಿದ್ದಳು. ಈ ವೇಳೆ ಎಲ್ಲಿಂದಲೋ ಜಗಳ ಮಾಡಿಕೊಂಡು ಬೀದಿನಾಯಿಗಳು ಅಲ್ಲಿಗೆ ಬಂದಿವೆ. ನಾಯಿಗಳ ಜಗಳ‌‌ ಕಂಡು ಬೆಚ್ಚಿಬಿದ್ದ ಬಾಲಕಿ ಮನೆಗೆ ಹಿಂದಿರುಗಿ ಓಡುವ ಭರದಲ್ಲಿ ಕೈಯ್ಯಲ್ಲಿದ್ದ ಹಣ ಕೆಳಗೆ ಬಿದ್ದಿದೆ. ಅದನ್ನು ಹೆಕ್ಕುವಷ್ಟರಲ್ಲಿ ನಾಯಿಗಳ‌ ಹಿಂಡು ಬಾಲಕಿಯ ಮೇಲೆ ದಾಳಿ ಮಾಡಿವೆ. ದಾಳಿಯಿಂದ ಬಾಲಕಿಯ ಕೈ, ಕಾಲಿಗೆ ಕಚ್ಚಿದ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!