Wednesday, June 3, 2026
Homeತಾಜಾ ಸುದ್ದಿಬೆಂಗಳೂರು: 6 ಆಟೋ ರಿಕ್ಷಾ ಕದ್ದ ಅಪ್ರಾಪ್ತ ಬಾಲಕ ಪೊಲೀಸರ ಬಲೆಗೆ !

ಬೆಂಗಳೂರು: 6 ಆಟೋ ರಿಕ್ಷಾ ಕದ್ದ ಅಪ್ರಾಪ್ತ ಬಾಲಕ ಪೊಲೀಸರ ಬಲೆಗೆ !

- Advertisement -
- Advertisement -

ಬೆಂಗಳೂರು: ನಗರದಲ್ಲಿ ನಡೆದಿರುವ ವಾಹನ ಕಳ್ಳತನ ಪ್ರಕರಣದಲ್ಲಿ ಅಪ್ರಾಪ್ತನೊಬ್ಬ ಆರೋಪಿಯಾಗಿರುವುದು ಬೆಳಕಿಗೆ ಬಂದಿದೆ.

ಮನೆ ಮುಂದೆ ನಿಲ್ಲಿಸಿದ ವಾಹನಗಳನ್ನು ಕದ್ದು ಬಿಡಿ ಭಾಗಗಳನ್ನಾಗಿ ಪರಿವರ್ತಿಸುತ್ತಿರುವ ಘಟನೆಗಳು ನಗರದಲ್ಲಿ ಆಗಾಗ ಕೇಳಿ ಬರುತ್ತಿತ್ತು. ಕಳ್ಳರು ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ವಾಹನಗಳನ್ನು ಮಾರಾಟ ಮಾಡುತ್ತಿದ್ದರು.

ಆರು ಆಟೋ ರಿಕ್ಷಾಗಳನ್ನು ಕದ್ದ ಆರೋಪದ ಮೇಲೆ ಅಪ್ರಾಪ್ತನೊಬ್ಬನನ್ನು ಪೊಲೀಸರು ಇದೀಗ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬಾಲಕನ ಬಳಿಯಿದ್ದ 15 ಲಕ್ಷ ರೂಪಾಯಿ ಮೌಲ್ಯದ ಕದ್ದ ಆಟೋ ರಿಕ್ಷಾಗಳನ್ನು ಜಪ್ತಿ ಮಾಡಲಾಗಿದೆ.

ಕೆಂಗೇರಿ, ಕಾಮಾಕ್ಷಿಪಾಳ್ಯ, ಕಾಟನ್ ಪೇಟೆ, ಚಂದ್ರಾ ಲೇಔಟ್, ಕುಂಬಳಗೋಡು, ಶೇಷಾದ್ರಿಪುರಂನಲ್ಲಿ ತ್ರಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಕೆಂಗೇರಿ ಪೊಲೀಸರು ಈ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

- Advertisement -

Latest News

error: Content is protected !!