Saturday, June 6, 2026
Homeತಾಜಾ ಸುದ್ದಿಮಂಗಳೂರು: ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು: ಮಸೀದಿ ಬಿಟ್ಟುಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ:...

ಮಂಗಳೂರು: ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು: ಮಸೀದಿ ಬಿಟ್ಟುಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆ

- Advertisement -
- Advertisement -

ಮಂಗಳೂರು: ಡಿಕೆಶಿ ಮಳಲಿ ಮಸೀದಿ ವಿಚಾರದಲ್ಲಿ ಮಾತಾಡದಂತೆ ತಮ್ಮ ಶಾಸಕರಿಗೆ ಹೇಳಿದ್ದಾರೆ. ಕಾಂಗ್ರೆಸ್ ಮುಸ್ಲಿಮರ ಪರ ಅಲ್ಲ ಅನ್ನೋದನ್ನ ತಿಳಿದುಕೊಳ್ಳಿ. ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು. ಪೂಜಾ ಸ್ಥಳ ಕಾಯ್ದೆ 1991 ಪ್ರಕಾರ ಮೂರು ವರ್ಷ ಜೈಲಿಗೆ ಹಾಕಬೇಕು. ಇದನ್ನು ಪೊಲೀಸರು ಓದಿಲ್ವೇ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸಿದ್ದಾರೆ.

ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಎಸ್‌ಡಿಪಿಐ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ ಅಬ್ದುಲ್ ಮಜೀದ್, ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು. ಮಸೀದಿ ಬಿಟ್ಟುಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ. ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ ಎಂದಿದ್ದಾರೆ.

ಹಾಗೇ 2006ರಲ್ಲಿ ಸಂಡೂರಿನ ಸುಗ್ಗುಲಮ್ಮ ದೇವಾಲಯ ಒಡೆದು ಹಾಕಿದ್ದರಲ್ಲ, ಸಂಘಪರಿವಾರದ ಕಾರ್ಯಕರ್ತರು ತಾಕತ್ತಿದ್ದರೆ ಅದರ ಬಗ್ಗೆ ತಾಂಬೂಲ ಪ್ರಶ್ನೆ ಇಡಲಿ. ಮಾಜಿ ಸಚಿವ ಜನಾರ್ದನ ರೆಡ್ಡಿ, ಸಚಿವ ಶ್ರೀರಾಮುಲು ಧ್ವಂಸಗೊಳಿಸಿದ್ದರಲ್ಲ ತಾಕತ್ತಿದ್ದರೆ ಜನಾರ್ದನ ರೆಡ್ಡಿ ಮನೆಗೆ ಮಾರ್ಚ್ ಮಾಡಲಿ ಎಂದು ಸವಾಲು ಹಾಕಿದ್ರು..

- Advertisement -

Latest News

error: Content is protected !!