Saturday, September 12, 2026
Homeತಾಜಾ ಸುದ್ದಿಮಾಜಿ ಕುಸ್ತಿಪಟುಗಳ ಮಾಸಾಶನ ಹೆಚ್ಚಿಸಿ ಸರ್ಕಾರ ಆದೇಶ

ಮಾಜಿ ಕುಸ್ತಿಪಟುಗಳ ಮಾಸಾಶನ ಹೆಚ್ಚಿಸಿ ಸರ್ಕಾರ ಆದೇಶ

- Advertisement -
- Advertisement -

ಬೆಂಗಳೂರು: ಮಾಜಿ ಕುಸ್ತಿಪಟುಗಳ ಮಾಸಾಶನ ಒಂದು ಸಾವಿರ ರೂಪಾಯಿ ಹೆಚ್ಚಿಸಿ ಸರ್ಕಾರಿ ಆದೇಶ ಹೊರಡಿಸಲಾಗಿದೆ.‌

50 ವರ್ಷ ಮೇಲ್ಪಟ್ಟ ಮಾಜಿ ಕುಸ್ತಿ ಪೈಲ್ವಾನ್‌ಗಳ ಮಾಸಾಶನ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2022-23 ರ ಬಜೆಟ್‌ನಲ್ಲಿ ಘೋಷಿಸಿದದ್ದರು. ಅದರಂತೆ ಮಾಸಾಶನವನ್ನು ಒಂದು ಸಾವಿರ ರೂಪಾಯಿ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.

ರಾಜ್ಯಮಟ್ಟದ ಮಾಜಿ ಕುಸ್ತಿಪಟುಗಳಿಗೆ 2500 ರೂಪಾಯಿಯಿಂದ 3500 ರೂಪಾಯಿ, ರಾಷ್ಟ್ರಮಟ್ಟದ ಮಾಜಿ ಕುಸ್ತಿಪಟುಗಳಿಗೆ 3000 ರೂಪಾಯಿಯಿಂದ 4000 ರೂಪಾಯಿ ಮತ್ತು ಅಂತರರಾಷ್ಟ್ರೀಯ ಮಟ್ಟದ ಮಾಜಿ ಕುಸ್ತಿಪಟುಗಳಿಗೆ 4000 ರೂಪಾಯಿಯಿಂದ 5000 ರೂಪಾಯಿಗೆ ಹೆಚ್ಚಿಸಲಾಗಿದೆ.

ಏಪ್ರಿಲ್ ಒಂದರಿಂದಲೇ ಈ ಆದೇಶವೂ ಜಾರಿಯಾಗಲಿದೆ. ಮಾಸಾಶನ ಹೆಚ್ಚಳ ಮಾಡಿರುವ ಬಗ್ಗೆ ಕ್ರೀಡಾ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

- Advertisement -

Latest News

error: Content is protected !!