Saturday, May 4, 2024
Homeತಾಜಾ ಸುದ್ದಿಪದವಿ ಪೂರ್ವ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ವಿಲೀನಕ್ಕೆ ರಾಜ್ಯ ಸರ್ಕಾರ...

ಪದವಿ ಪೂರ್ವ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ವಿಲೀನಕ್ಕೆ ರಾಜ್ಯ ಸರ್ಕಾರ ನಿರ್ಧಾರ

spot_img
- Advertisement -
- Advertisement -

ಬೆಂಗಳೂರು: ಪದವಿ ಪೂರ್ವ ಪರೀಕ್ಷಾ ಮಂಡಳಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಗಳ ವಿಲೀನಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಆರ್ಥಿಕ ನಷ್ಟ ಮತ್ತು ಹೆಚ್ಚುವರಿ ಸಿಬ್ಬಂದಿ ಅವಶ್ಯಕತೆ ಕಾರಣದಿಂದ ಎರಡೂ ಪರೀಕ್ಷಾ ಮಂಡಳಿಗಳ ವಿಲೀನಕ್ಕೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.ಪದವಿ ಪೂರ್ವ ಪರೀಕ್ಷಾ‌ ಮಂಡಳಿ ಕೇವಲ ಪಿಯುಸಿ‌ ಪರೀಕ್ಷೆಗಳನ್ನು ಮಾತ್ರ ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಜೊತೆಗೆ ವಿಲೀನಕ್ಕೆ ನಿರ್ಧರಿಸಲಾಗಿದೆ.

ಇದರ ಜೊತೆಗೆ ಶಿಕ್ಷಕರ ಮ್ಯೂಚುವಲ್‌ ವರ್ಗಾವಣೆಗೂ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಒಂದೇ ವಿಷಯದ ಇಬ್ಬರೂ ಶಿಕ್ಷಕರು ಒಪ್ಪಿಗೆ ಇದ್ದಲ್ಲಿ ಪರಸ್ಪರ ವರ್ಗಾವಣೆಗೆ ಅವಕಾಶ ದೊರೆಯಲಿದೆ. ಈ ಸಂಬಂಧ ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ ವಿಧಾನ ಮಂಡಲದಲ್ಲಿ ಇಂದು ಮಂಡನೆಯಾಗಲಿದೆ.

- Advertisement -
spot_img

Latest News

error: Content is protected !!