Thursday, May 2, 2024
Homeತಾಜಾ ಸುದ್ದಿರಾಜ್ಯದಲ್ಲಿ ಹೊಸ ದಾಖಲೆ ಬರೆದ ಕೊರೊನಾ: ಒಂದೇ ದಿನ 6128 ಮಂದಿಗೆ ಸೋಂಕು ದೃಢ

ರಾಜ್ಯದಲ್ಲಿ ಹೊಸ ದಾಖಲೆ ಬರೆದ ಕೊರೊನಾ: ಒಂದೇ ದಿನ 6128 ಮಂದಿಗೆ ಸೋಂಕು ದೃಢ

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೊರೋನಾ ಸ್ಪೋಟವಾಗಿದ್ದು, ಇದುವರೆಗಿನ ಒಂದು ದಿನದ ದಾಖಲೆ ಹಿಂದಿಕ್ಕಿದೆ. ಸತತ 7 ದಿನ 5 ಸಾವಿರಕ್ಕಿಂತ ಹೆಚ್ಚಿನ ಕೇಸ್ ದಾಖಲಾಗುತ್ತಿದ್ದ ರಾಜ್ಯದಲ್ಲಿ ಒಂದೇ ದಿನ 6 ಸಾವಿರ ಗಡಿ ದಾಟಿದ್ದು, ಬರೋಬ್ಬರಿ 6128 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 1,18,632 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 3793 ಮಂದಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 46,694 ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇವತ್ತು ಒಂದೇ ದಿನ 83 ಮಂದಿ ಸಾವನ್ನಪ್ಪಿದ್ದು ರಾಜ್ಯದಲ್ಲಿ ಇದುವರೆಗೆ 2230 ಜನ ಮೃತಪಟ್ಟಿದ್ದಾರೆ. 69.700 ಸಕ್ರಿಯ ಪ್ರಕರಣಗಳಿದ್ದು 620 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -
spot_img

Latest News

error: Content is protected !!