Thursday, June 4, 2026
Homeತಾಜಾ ಸುದ್ದಿಮಲಯಾಳಂ ಚಿತ್ರರಂಗದ ಖಡಕ್ ವಿಲನ್ ಅನಿಲ್ ಮುರಳಿ ವಿಧಿವಶ

ಮಲಯಾಳಂ ಚಿತ್ರರಂಗದ ಖಡಕ್ ವಿಲನ್ ಅನಿಲ್ ಮುರಳಿ ವಿಧಿವಶ

- Advertisement -
- Advertisement -

ಕೊಚ್ಚಿ: ಮಲೆಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಹೀರೊಗೆ ಠಕ್ಕರ್ ಕೊಡೋ ವಿಲನ್ ಆಗಿ, ರೌಡಿಗಳಿಗೆ ಸಪೋರ್ಟ್ ಮಾಡೋ ಪೊಲೀಸ್ ಮಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿ, ತನ್ನದೇ ಆದಾ ಆಭಿಮಾನಿ ಬಳಗವನ್ನ ಹೊಂದಿದ್ದ ಜನಪ್ರಿಯ ನಟ ಅನಿಲ್ ಮುರಳಿ, ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

. ಮಲಯಾಳಂ, ತಮಿಳು, ತೆಲುಗು ಭಾಷೆಗಳ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ 56 ವರ್ಷದ ಅನಿಲ್‌ ಮುರಳಿ ಲಿವರ್‌ಗೆ ಸಂಬಂಧಪಟ್ಟ ಕಾಯಿಲೆಗಳಿಂದ ಬಳಲುತ್ತಿದ್ದರು. ಇವರು ಪತ್ನಿ ಸುಮಾ ಹಾಗೂ ಮಗ ಆದಿತ್ಯ, ಮಗಳು ಅರುಂಧತಿ ಅವರನ್ನು ಅಗಲಿದ್ದಾರೆ.

ಲಯನ್, ಬಲರಾಮ್‌ ವರ್ಸಸ್‌ ತಾರಾದಾಸ್‌, ಮಹಾಸಮುದ್ರಂ, ನೆರರಿಯನ್ ಸಿಬಿಐ, ಜುಲೈ 4, ರನ್ ಬೇಬಿ ರನ್‌, ರಾಮಲೀಲಾ, ಜೋಸೆಫ್‌, ಥನಿ ಒರುವನ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದರು.

- Advertisement -

Latest News

error: Content is protected !!