Thursday, May 2, 2024
Homeತಾಜಾ ಸುದ್ದಿಮೇ 19 ರಂದು ಮಧ್ಯಾಹ್ನ 1 ಗಂಟೆಗೆ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ: ವಿದ್ಯಾರ್ಥಿಗಳ ಮೊಬೈಲ್ ಗೇ...

ಮೇ 19 ರಂದು ಮಧ್ಯಾಹ್ನ 1 ಗಂಟೆಗೆ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ: ವಿದ್ಯಾರ್ಥಿಗಳ ಮೊಬೈಲ್ ಗೇ ಬರಲಿದೆ ರಿಸಲ್ಟ್

spot_img
- Advertisement -
- Advertisement -

ಬೆಂಗಳೂರು: ಮೇ. 19 ರಂದು ಮಧ್ಯಾಹ್ನ 1 ಗಂಟೆ ವೇಳೆಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಹೊರ ಬೀಳಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
2021-22 ನೇ ಶೈಕ್ಷಣಿಕ ಸಾಲಿನ ಫಲಿತಾಂಶವನ್ನು ಪ್ರಕಟಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದಲ್ಲಿಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶ ತಲುಪಲಿದೆ. ಪ್ರತಿ ಸೆಕೆಂಡಿಗೆ ಇಬ್ಬರಿಗೆ ಫಲಿತಾಂಶದ ವಿವರ ಮೊಬೈಲ್‌ಗೆ ರವಾನೆಯಾಗಲಿದೆ. ಮೇ. 19 ಸಂಜೆ ವೇಳೆಗೆ ಫಲಿತಾಂಶದ ವಿವರಗಳು ವಿದ್ಯಾರ್ಥಿಗಳ ಮೊಬೈಲ್ ಗಳಿಗೆ ಹೋಗಲಿದೆ.
ಇನ್ನು ಅಧಿಕೃತ ವೆಬ್ ತಾಣಗಳಾದ https://sslc.karnataka.gov.in/ಹಾಗೂhttps://karresults.nic.in/ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಅಧಿಕೃತವಾಗಿ ಫಲಿತಾಂಶ ಪ್ರಕಟವಾದ ಕೂಡಲೇ ವೆಬ್ ತಾಣದಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಕೋವಿಡ್ ನಡುವೆಯೂ ಕರ್ನಾಟಕದಲ್ಲಿ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ 8.73 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಮಾ. 28 ರಿಂದ ಏ. 11 ರ ವರೆಗೆ ಪರೀಕ್ಷೆ ನಡೆದಿತ್ತು. ಹದಿನೈದು ಸಾವಿರ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

- Advertisement -
spot_img

Latest News

error: Content is protected !!