Friday, June 5, 2026
Homeಕರಾವಳಿಮತ್ತೊಂದು ದಾಖಲೆ ಬರೆದ ಕಂಬಳದ ಉಸೆನ್ ಬೋಲ್ಟ್ ಶ್ರೀನಿವಾಸ್ ಗೌಡ

ಮತ್ತೊಂದು ದಾಖಲೆ ಬರೆದ ಕಂಬಳದ ಉಸೆನ್ ಬೋಲ್ಟ್ ಶ್ರೀನಿವಾಸ್ ಗೌಡ

- Advertisement -
- Advertisement -

ಕಾರ್ಕಳ: ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಶ್ರೀನಿವಾಸ ಗೌಡ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದ ಸೂರ್ಯ – ಚಂದ್ರ ಜೋಡುಕರೆ ಕಂಬಳದಲ್ಲಿ ಈ ಹಿಂದಿನ ಎಲ್ಲಾ ದಾಖಲೆಯನ್ನು ಪುಡಿ ಮಾಡಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ಕೋಣಗಳನ್ನು ಓಡಿಸಿದ ಶ್ರೀನಿವಾಸ ಗೌಡ ಕೇವಲ 11.21 ಸೆಕೆಂಡ್ಸ್ ನಲ್ಲಿ ಗುರಿ ತಲುಪಿದರು. 100 ಮೀಟರ್ ಗೆ ಹೋಲಿಸಿದಾಗ 8.96 ಸೆಕೆಂಡ್ಸ್ ನಲ್ಲಿ ಗುರಿ ತಲುಪಿದಂತಾಗಿದ್ದು, ಇದು ಹೊಸ ದಾಖಲೆಯಾಗಿದೆ.

ಕಳೆದ ಫೆ.6ರಂದು ನಡೆದ ಐಕಳ ಕಂಬಳದಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿಯವರ ಕೋಣಗಳನ್ನು ಓಡಿಸಿದ್ದ ಬೈಂದೂರು ವಿಶ್ವನಾಥ 9.15 ಸೆಕೆಂಡ್ ನಲ್ಲಿ (100 ಮೀಟರ್ ಗೆ) ಓಡಿಸಿ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಇಂದು ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಅಳಿಸಿ ಹಾಕಿದ್ದಾರೆ.

ಅಂದಹಾಗೆ ವಿಶ್ವಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆ ಇರುವುದು 9.58 ಸೆಕೆಂಡ್ಸ್. ಇದೀಗ ಕಂಬಳದಲ್ಲಿ ಶ್ರೀನಿವಾಸ ಗೌಡ ತಮ್ಮ ಹಳೆಯ ದಾಖಲೆಯನ್ನೇ ಮುರಿದಿದ್ದಾರೆ.

- Advertisement -

Latest News

error: Content is protected !!