Friday, June 26, 2026
Homeತಾಜಾ ಸುದ್ದಿಕ್ರೀಡಾ ತರಬೇತುದಾರರಿಗೆ ಯುಗಾದಿ ಗಿಫ್ಟ್ : ಸಂಚಿತ ವೇತನ ಶೇ.20 ರಷ್ಟು ಹೆಚ್ಚಳ

ಕ್ರೀಡಾ ತರಬೇತುದಾರರಿಗೆ ಯುಗಾದಿ ಗಿಫ್ಟ್ : ಸಂಚಿತ ವೇತನ ಶೇ.20 ರಷ್ಟು ಹೆಚ್ಚಳ

- Advertisement -
- Advertisement -

ಬೆಂಗಳೂರು: ಕ್ರೀಡಾ ಇಲಾಖೆಯ ತರಬೇತುದಾರರಿಗೆ 20% ಸಂಚಿತ ವೇತನ ಹೆಚ್ಚಳ ಮಾಡಲಾಗಿದೆ. ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ತರಬೇತುದಾರರ ಸಂಚಿತ ವೇತನ ಶೇ. 20ರಷ್ಟು ಹೆಚ್ಚಳ ಮಾಡಿ ಆದೇಶಿಸಲಾಗಿದೆ.

ಪದವಿ ಮತ್ತು ಕ್ರೀಡಾ ತರಬೇತಿಯಲ್ಲಿ ಡಿಪ್ಲೋಮಾ ಮಾಡಿರುವ ತರಬೇತುದಾರರಿಗೆ 39,960 ರೂಪಾಯಿಯಿಂದ 47, 952 ರೂಪಾಯಿಗೆ ಹೆಚ್ಚಿಸಲಾಗಿದೆ. ಪದವೀಧರೇತರ ಹಾಗೂ ಕ್ರೀಡಾ ತರಬೇತಿಯಲ್ಲಿ ಡಿಪ್ಲೋಮಾ ಪಡೆದಿರುವ ತರಬೇತುದಾರರಿಗೆ 31,050 ರೂಪಾಯಿಯಿಂದ 37,260 ರೂಪಾಯಿಗೆ ಹೆಚ್ಚಿಸಲಾಗಿದೆ. ಪರಿಷ್ಕೃತ ವೇತನ ಏಪ್ರಿಲ್ 1 ರಿಂದಲೇ ಜಾರಿಯಾಗಲಿದೆ.

- Advertisement -

Latest News

error: Content is protected !!