Friday, June 5, 2026
Homeಕರಾವಳಿಕರಾವಳಿಯಲ್ಲಿ ತನ್ನ ಜಾದೂವಿನ ಮೂಲಕ ಮೋಡಿ ಮಾಡುತ್ತಿದ್ದಾರೆ ಈ ಅನಾಥ ವ್ಯಕ್ತಿ: ಇವರ ಮ್ಯಾಜಿಕ್...

ಕರಾವಳಿಯಲ್ಲಿ ತನ್ನ ಜಾದೂವಿನ ಮೂಲಕ ಮೋಡಿ ಮಾಡುತ್ತಿದ್ದಾರೆ ಈ ಅನಾಥ ವ್ಯಕ್ತಿ: ಇವರ ಮ್ಯಾಜಿಕ್ ನೋಡಿದ್ರೆ ನೀವು ಮೂಗಿನ ಮೇಲೆ ಬೆರಳಿಡ್ತೀರಾ..

- Advertisement -
- Advertisement -

ಮಂಗಳೂರು:  ಪ್ರತಿಭೆ ಅನ್ನೋದು ಯಾರಪ್ಪನ ಸೋತ್ತಲ್ಲ ಅನ್ನೋದಕ್ಕೆ ಈ ವ್ಯಕ್ತಿಯೇ ಸಾಕ್ಷಿ. ಯಾರಲ್ಲಿ ಟ್ಯಾಲೆಂಟ್ ಇರುತ್ತೆ ಅಂತಾ ಹೇಳೋದಕ್ಕೆ ಆಗಲ್ಲ ಅಂತಾ ಇವರನ್ನು ನೋಡಿದ್ರೆ ಅನ್ನಿಸದೇ ಇರಲ್ಲ. ಸದ್ಯ ವಾಟ್ಸಾಪ್ ನಲ್ಲಿ ಈ ವ್ಯಕ್ತಿಯ ವಿಡಿಯೋ ಹರಿದಾಡುತ್ತಿದೆ. ಜಸ್ಟ್ ಒಂದು ಕಾಯಿನ್ ಹಾಗೂ ಟೊಮ್ಯಾಟೋದಲ್ಲಿ ಇವರು ಮಾಡುವ ಜಾದೂ ನೋಡಿದ್ರೆ ಯಾರಾದ್ರೂ ಅವರ ಕಲೆಗೆ ಮರುಳಾಗದೇ ಇರೋದಿಲ್ಲ.

ಅಂದ್ಹಾಗೆ ಕರಾವಳಿಯ ಹಲವು ಭಾಗಗಳಲ್ಲಿ ಅಡ್ಡಾಡುತ್ತಾ ಜೀವನ ಸಾಗಿಸುತ್ತಿರುವ ಈ ವ್ಯಕ್ತಿ ಎಲ್ಲಿಯವರು ಹೆಸರೇನು ಯಾವ ಮಾಹಿತಿ ಇಲ್ಲ. ಆದರೆ ವಿಡಿಯೋ ನೋಡಿದ್ರೆ ಇದು ಕರಾವಳಿ ಭಾಗದಲ್ಲಿ ಅನ್ನೋದು ಗೊತ್ತಾಗುತ್ತೆ. ಇನ್ನು ಈ ವ್ಯಕ್ತಿಯನ್ನು ನೋಡಿದ್ರೆ ಎಂಥವರಿಗಾದರೂ ಅಯ್ಯೋ ಅಂತಾ ಅನ್ನಿಸದೇ ಇರೋದಿಲ್ಲ. ತನ್ನಲ್ಲಿ ಪ್ರತಿಭೆಯಿದ್ದರೂ ನಿರ್ಗತಿಕನಂತೆ ಅಲ್ಲಿ ಇಲ್ಲಿ ಅಡ್ಡಾಡ್ಡಿ ಜಾದೂ ತೋರಿಸಿ ಅವರಿವರು ಕೊಡೋ ದುಡ್ಡಿನಿಂದ ತನ್ನ ಬದುಕು ಸಾಗಿಸುತ್ತಿದ್ದಾರೆ. ಯಾರಾದರೂ ಇವರಿಗೆ ಒಂದು ವ್ಯವಸ್ಥೆ ಕಲ್ಪಿಸಿಕೊಟ್ಟರೆ ಅವರ ಕಲೆಗೆ ಒಂದು ಅರ್ಥ ಬರೋದರಲ್ಲಿ ಅನುಮಾನವಿಲ್ಲ…

- Advertisement -

Latest News

error: Content is protected !!