- Advertisement -
- Advertisement -
ಮಂಗಳೂರು: ಕರಾವಳಿ ಭಾಗದಲ್ಲಿ ಕೋಮು ಸಂಘರ್ಷ ತಡೆಯುವ ಉದ್ದೇಶವನ್ನಿಟ್ಟುಕೊಂಡು ರಾಜ್ಯ ಸರ್ಕಾರ ಆರಂಭಿಸಿರುವ ಸ್ಪೆಷಲ್ ಆಕ್ಷನ್ ಫೋರ್ಸ್ ಇಂದು ಅಸ್ತಿತ್ವಕ್ಕೆ ಬಂದಿದೆ.
ಮಂಗಳೂರಿನ ಕವಾಯತು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪೆಷಲ್ ಆಕ್ಷನ್ ಫೋರ್ಸ್ ಗೆ ಚಾಲನೆ ನೀಡಿದರು. ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭಾಗಿಯಾಗಿದ್ದರು.
ಮಂಗಳೂರು ಕೇಂದ್ರಿತವಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸ್ಪೆಷಲ್ ಆಕ್ಷನ್ ಫೋರ್ಸ್ ಕಾರ್ಯಾಚರಣೆ ನಡೆಸಲಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಸ್ ಎಎಫ್ ನೇತೃತ್ವ ವಹಿಸಲಿದ್ದಾರೆ.
248 ಸಿಬ್ಬಂದಿ ಒಳಗೊಂಡ ಮೂರು ತುಕಡಿಯಲ್ಲಿ ತಲಾ 80 ಸಿಬ್ಬಂದಿ ಇರಲಿದ್ದು, ನಕ್ಸಲ್ ನಿಗ್ರಹ ದಳದಲ್ಲಿದ್ದ 656 ಸಿಬ್ಬಂದಿಯಲ್ಲಿ 248 ಸಿಬ್ಬಂದಿಯನ್ನು ಎಸ್ ಎಎಫ್ ಗೆ ನಿಯೋಜನೆ ಮಾಡಲಾಗಿದೆ.
- Advertisement -