- Advertisement -
- Advertisement -
ಸಿಯೋಲ್: ದಕ್ಷಿಣ ಕೊರಿಯಾ ದೇಶದಲ್ಲಿ ಅಧ್ಯಯನ ಪ್ರವಾಸದಲ್ಲಿರುವ ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಸಿಯೋಲ್‌ನಲ್ಲಿ ಭಾರತದ ರಾಯಭಾರಿ ಮತ್ತು ಹಿರಿಯ ಭಾರತೀಯ ಆಡಳಿತ ಸೇವೆಯ ಅಧಿಕಾರಿ ಅಮಿತ್ ಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು
ಈ ಸಂದರ್ಭದಲ್ಲಿ ಉಭಯ ದೇಶಗಳ ಸಂಬಂಧಗಳು, ಶಿಕ್ಷಣ, ವ್ಯಾಪಾರ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕುರಿತು ಅನೌಪಚಾರಿಕವಾಗಿ ಯು.ಟಿ. ಖಾದರ್ ಚರ್ಚಿಸಿದರು.ಅಲ್ಲದೇ, ಕರ್ನಾಟಕದಲ್ಲಿನ ಹೂಡಿಕೆಯ ನಿರೀಕ್ಷೆಗಳು, ಅವಕಾಶಗಳ ಬಗ್ಗೆ ವಿಚಾರ ವಿನಿಮಯ ಕೂಡಾ ನಡೆಯಿತು.
ಇದೇ ವೇಳೆ, ಕರ್ನಾಟಕದ ವಿಶ್ವವಿದ್ಯಾಲಯಗಳು ದಕ್ಷಿಣ ಕೊರಿಯಾದ ವಿಶ್ವವಿದ್ಯಾಲಯಗಳ ಕಾಲೇಜುಗಳಲ್ಲಿನ ವಿವಿಧ ಕೋರ್ಸ್‌ಗಳ ಮತ್ತು ಉದ್ಯೋಗಾವಕಾಶಗಳ ಕುರಿತು ಪರಸ್ಪರ ಒಪ್ಪಂದಗಳನ್ನು ಮಾಡಿಕೊಳ್ಳುವ ಬಗ್ಗೆ ಭಾರತದ ರಾಯಭಾರಿಗಳೊಂದಿಗೆ ಸ್ಪೀಕರ್ ಚರ್ಚಿಸಿದ್ದಾರೆ.
- Advertisement -