Thursday, April 25, 2024
Homeಕರಾವಳಿಗಡಾಯಿಕಲ್ಲಿನಲ್ಲಿ ಭಾರೀ ಸ್ಫೋಟದ ಶಬ್ದ: ಬೆಚ್ಚಿ ಬಿದ್ದ ಸ್ಥಳೀಯರು

ಗಡಾಯಿಕಲ್ಲಿನಲ್ಲಿ ಭಾರೀ ಸ್ಫೋಟದ ಶಬ್ದ: ಬೆಚ್ಚಿ ಬಿದ್ದ ಸ್ಥಳೀಯರು

spot_img
- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ನಡ ಗ್ರಾಮದ ಇತಿಹಾಸ ಪ್ರಸಿದ್ಧ ಗಡಾಯಿಕಲ್ಲುನಲ್ಲಿ ಸ್ಫೋಟದ ಭಾರೀ ಶಬ್ದ ಇಂದು ಬೆಳಿಗ್ಗೆ ಸ್ಥಳೀಯರಿಗೆ ಕೇಳಿಸಿದ್ದು, ಏಕಾಏಕಿ ಶಬ್ಧಕ್ಕೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ಇನ್ನು ಈ ಸ್ಫೋಟದ ಬಳಿಕ ಗಡಾಯಿಕಲ್ಲು ನ ಒಂದು ಬದಿಯಲ್ಲಿ ಕಲ್ಲಿನ ಭಾಗ ಕೆಳಗೆ ಜಾರಿ ಬಿದ್ದಿದೆ, ಗಡಾಯಿಕಲ್ಲು ಮೇಲೆ ಪೂತಿ೯ ಧೂಳು ಅವರಿಸಿದೆ ಎಂದು ಗ್ರಾ. ಪಂ ಮಾಜಿ ಸದಸ್ಯ ಹಾಗೂ ಹಿಂದೂ ಸಂಘಟನೆಯ ಹಿರಿಯ ಮುಖಂಡರ ಶ್ಯಾಮಸುಂದರ್ ನಡ ತಿಳಿಸಿದ್ದಾರೆ.

ಸ್ಫೋಟ ಸುಮಾರು 1 ಕಿ.ಮೀಗೂ ಹೆಚ್ಚು ದೂರ ಕೇಳಿಸಿದ್ದು, ಪರಿಸರದ ನಾಗರಿನ್ನು ಬೆಚ್ಚಿ ಬೀಳಿಸಿತ್ತು. ಕಳೆದ ವಷ೯ವೂ ಇದೇ ಅವಧಿಯಲ್ಲಿ ಗಡಾಯಿಕಲ್ಲು ನ ಒಂದು ಭಾಗದ ಕಲ್ಲು ಸ್ಫೋಟ ಗೊಂಡು ಕೆಳಗೆ ಜಾರಿ ಬಿದ್ದಿತ್ತು. ಇದೀಗ ಇಂದು ಮತ್ತೆ ಅಂತಹದ್ದೇ ಘಟನೆ ನಡೆದಿದ್ದು ಜನ ಭಯಗೊಂಡಿದ್ದಾರೆ.

- Advertisement -
spot_img

Latest News

error: Content is protected !!