Tuesday, July 1, 2025
Homeಮನರಂಜನೆಮಕ್ಕಳ ಆನ್ ಲೈನ್ ವಿದ್ಯಾಭ್ಯಾಸಕ್ಕೆ ಹಸು ಮಾರಿದ ತಂದೆ, ಕುಟುಂಬಕ್ಕೆ ನೆರವಾದ ಸೋನು ಸೂದ್

ಮಕ್ಕಳ ಆನ್ ಲೈನ್ ವಿದ್ಯಾಭ್ಯಾಸಕ್ಕೆ ಹಸು ಮಾರಿದ ತಂದೆ, ಕುಟುಂಬಕ್ಕೆ ನೆರವಾದ ಸೋನು ಸೂದ್

spot_img
- Advertisement -
- Advertisement -

ಮುಂಬೈ: ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ನೆರವು ನೀಡುವ ಮೂಲಕ ರೀಲ್ ಲೈಫ್ ನಲ್ಲಿ ವಿಲನ್ ಆದರೂ ರಿಯಲ್ ಲೈಫ್ ನಲ್ಲಿ ಹೀರೋ ಆದ ನಟ ಸೋನು ಸೂದ್ ಇದೀಗ ಮತ್ತೊಂದು ಸಹಾಯ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ದೇಶಾದ್ಯಂತ ಕೊರೋನಾ ವೈರಸ್ ನಿಂದಾಗಿ ಶಾಲಾ ಕಾಲೇಜುಗಳನ್ನು ತೆರೆಯಲು ಸಾಧ್ಯವಾಗದೆ ಆನ್ ಲೈನ್ ಶಿಕ್ಷಣ ದೇಶದೆಲ್ಲೆಡೆ ಜಾರಿಯಾಗಿದೆ. ಆದರೇ ಬಡ ಕುಟುಂಬಗಳಿಗೆ ಆನ್ ಲೈನ್ ತರಗತಿಗಳು ಕಷ್ಟವಾಗಿದೆ. ಇಲ್ಲೊಬ್ಬ ವ್ಯಕ್ತಿ ತನ್ನ ಹೆಣ್ಣುಮಕ್ಕಳ ಆನ್ ಲೈನ್ ಶಿಕ್ಞಣಕ್ಕಾಗಿ ಮೊಬೈಲ್ ಕೊಳ್ಳುವುದಕ್ಕೆ ಸಾಕಿದ ಹಸುವನ್ನೇ ಮಾರಿದ್ದರು. ಇದು ಸೋನು ಸೂದ್ ಅವರ ಗಮನಕ್ಕೆ ಬಂದು ಹಸು ಮಾರಿದ ವ್ಯಕ್ತಿಗೆ ಸಹಾಯ ಹಸ್ತ ಚಾಚಿದ್ದಾರೆ.

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಗಮ್ಮರ್‌ ಗ್ರಾಮದಲ್ಲಿ ನಲೆಸಿರುವ ಕುಲ್ದೀಪ್‌ ಕುಮಾರ್‌ ಎಂಬ ವ್ಯಕ್ತಿಯೇ ಹಸು ಮಾರಿದವರು. ತನ್ನ ಹೆಣ್ಣು ಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕಾಗಿ ಮೊಬೈಲ್‌ ಬೇಕಾಗಿದ್ದರಿಂದ ಹಸು ಮಾರಿದ್ದರು. ಈ ವಿಷಯ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆ ಅತ್ತ ಕಡೆ ಗಮನ ಹರಿಸಿದ ಸೋನು ಸೂಡು ಅವರಿಗೆ ನೆರವಾಗುವುದಾಗಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!