Friday, April 19, 2024
Homeತಾಜಾ ಸುದ್ದಿಕೊರೊನಾದಿಂದ ಸಾವನ್ನಪ್ಪಿದ ತಾಯಿ ಶವ ಸಾಗಿಸಲು ಆಂಬ್ಯುಲೆನ್ಸ್ ಸಿಗದೇ ಪರದಾಟ: ಬೆಂಗಳೂರಿನಿಂದ ಮಂಡ್ಯಗೆ ಆಟೋದಲ್ಲೇ...

ಕೊರೊನಾದಿಂದ ಸಾವನ್ನಪ್ಪಿದ ತಾಯಿ ಶವ ಸಾಗಿಸಲು ಆಂಬ್ಯುಲೆನ್ಸ್ ಸಿಗದೇ ಪರದಾಟ: ಬೆಂಗಳೂರಿನಿಂದ ಮಂಡ್ಯಗೆ ಆಟೋದಲ್ಲೇ ಮೃತದೇಹ ಸಾಗಿಸಿದ ಮಗ

spot_img
- Advertisement -
- Advertisement -

ಬೆಂಗಳೂರು: ಆಂಬ್ಯುಲೆನ್ಸ್  ಸಿಗದೆ  ಕೊರೊನಾದಿಂದ ಸಾವನ್ನಪ್ಪಿದ ತಾಯಿಯ ಶವವನ್ನು ಮಗನೊಬ್ಬ ಬೆಂಗಳೂರಿನಂದ ಮಂಡ್ಯದವರೆಗೂ ಆಟೋದಲ್ಲೇ ಕೊಂಡೊಯ್ದ ಹೃದಯವಿದ್ರಾವಕ ಘಟನೆ ನಡೆದಿದೆ.

ಮಹಾಮಾರಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ತಾಯಿ ಶಾರದಮ್ಮ(73)ಳನ್ನು ಬದುಕಿಸಿಕೊಳ್ಳಲೇಬೇಕೆಂದು ಮಂಡ್ಯ ಜಿಲ್ಲೆ ಮಳವಳ್ಳಿಯಿಂದ ಬೆಂಗಳೂರಿಗೆ ತಾಯಿಯನ್ನ ಕರೆದುಕೊಂಡು ಮಗ ಶಿವಕುಮಾರ್​ ಬಂದಿದ್ದರು. ಬೆಡ್​​ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದರು. ನನ್ನ ತಾಯಿಯನ್ನ ಉಳಿಸಿಕೊಡಿ ಎಂದಿ ಅಂಗಲಾಚಿದ್ದರು. ಕೊನೆಗೂ ಖಾಸಗಿ ಆಸ್ಪತ್ರೆಯೊಂದರಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಲು ದಾಖಲಿಸಿ ನಿಟ್ಟುಸಿರು ಬಿಟ್ಟರಾದರೂ ಆ ತಾಯಿ ಬದುಕಲಿಲ್ಲ.

ತಾಯಿಯನ್ನ ಕಳೆದುಕೊಂಡ ನೋವಿನಲ್ಲೇ ಶವವನ್ನು ಊರಿಗೆ ಕೊಂಡೊಯ್ಯಲು ಪರದಾಡುವ ದುಸ್ಥಿತಿ ಉಂಟಾಯಿತು. ಆಂಬುಲೆನ್ಸ್​ಗಾಗಿ ಪರದಾಡಿದರೂ ಸಿಗಲಿಲ್ಲ. ಊರಿಗೆ ಮೃತದೇಹ ಕೊಂಡಯ್ಯಲೇಬೇಕೆಂದು ಪಣತೊಟ್ಟಿದ್ದಾರೆ ಶಿವಕುಮಾರ್​.

ಆಟೋ ಚಾಲಕರೊಬ್ಬರ ಬಳಿ ಅಂಗಲಾಚಿದ. ಮಾನವೀಯತೆ ಮೆರೆದ ಆಟೋ ಚಾಲಕ ಶಗ ಸಾಗಿಲು ಒಪ್ಪಿದರು. ಕರೊನಾದಿಂದ ಶಾರದಮ್ಮ ಮೃತಪಟ್ಟಿದ್ದರೂ ಆಸ್ಪತ್ರೆಯವರು ಮೃತದೇಹಕ್ಕೆ ಪಿಪಿಇ ಕಿಟ್​ ಅನ್ನೂ ಹಾಕದೆ ಶವ ಹಸ್ತಾಂತರಿಸಿದ್ದಾರೆ. ತಾಯಿ ಶವವನ್ನು ಆಟೋದಲ್ಲಿ ಮಲಗಿಸಲು ಸಾಧ್ಯವಾಗದೆ ಕೂರಿಸಿದ್ದಾರೆ. ಆಟೋದಲ್ಲಿ ಕುಲುಕಿ ಬೀಳದಂತೆ ಅಮ್ಮನ ತಲೆಯನ್ನು ಶಿವಕುಮಾರ್​ ಎದೆಗೆ ಆನಿಸಿಕೊಂಡೇ ಪ್ರಯಾಣ ಬೆಳೆಸಿದ ದೃಶ್ಯ ಮನಕಲಕುವಂತಿತ್ತು.

ಇನ್ನು ರಾಜ್ಯಾದ್ಯಂತ ಲಾಕ್​ಡೌನ್​ ಜಾರಿಯಲ್ಲಿರುವುದರಿಂದ ಪೊಲೀಸರು ಅಲ್ಲಲ್ಲಿ ಆಟೋ ನಿಲ್ಲಿಸಿ ತಪಾಸಣೆ ಮಾಡಿದ್ದು, ಶಿವಕುಮಾರ್​ ಅಸಹಾಯಕತೆ ಕಂಡು ಅವರೂ ಮರುಗಿದ್ದಾರೆ. ಮಂಡ್ಯದಿಂದ ಮಳವಳ್ಳಿಗೆ ಪೊಲೀಸರೇ ಆಂಬುಲೆನ್ಸ್​ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!